awareness among the impetuous Hindu girls-ಡಿಸಿ, ಎಸ್ಪಿ ಅವರ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ ಎಚ್ಚರವಿರಲಿ-ಮುತಾಲಿಕ್

 Suddilive || Shivamogga

To create awareness among the impetuous Hindu girls, the book Lach Jihad is being printed and distributed at a cost of 1 lakh copies.

Hindu, Girls


ದುಡುಕುವ ಹಿಂದೂ ಹುಡುಗಿಯರಿಗೆ ಜಾಗೃತಿ ಮೂಡಿಸಲು 1 ಲಕ್ಷ ಪ್ರತಿ ಲಚ್ ಜಿಹಾದ್ ಪುಸ್ತಕವನ್ನ  ಮುದ್ರಣ ಮಾಡಿ ಹಂಚಲಾಗುತ್ತಿದೆ. ಇಸ್ಲಾಂ ನ ಉದ್ದೇಶ ಜನಸಂಖ್ಯೆ ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಲವ್ ಜಿಹಾದ್ ಒಂದು ವಿಭಾಗ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು. 

ಸುದ್ದಿಗೋಷ್ಠಿ ನಡೆಸಿದ ಅವರು, ಇಸ್ಲಾಮೀಕರಣಕ್ಕೆ ಇದೊಂದು ಮಾರ್ಗ ಇದು ನಿಜವಾದ ಪ್ರೀತಿ ಅಲ್ಲ, ಮೋಸ ಇದು. ದಗಾ ಇದು. ಹಿಂದೂಗಳ ಹೆಸರಿಗೆ ಬದಲಾಯಿಸಿಕೊಂಡು ಪ್ರೀತಿಯ ಜಾಲ ಬೀಸುವ ಹುನ್ನಾರವಿದು. ತಾಯಿ ಮತ್ತು ದೇವರನ್ನ ರಕ್ಷಿಸುವುದು ನಮ್ಮ ಕರ್ತವ್ಯವೆಂದರು. 

2009 ರಲ್ಲಿ ಲವ್ ಜಿಹಾದ್ ಇರಲಿಲ್ಲ. ಲವ್ ಜಿಹಾದ್ ಬಗ್ಗೆ ಮಾತನಾಡಿದಾಗ ನಮ್ಮನ್ನ ಅವಮಾನ ಮಾಡಲಾಗಿಯ್ತು. ಸುಪ್ರೀಂ‌ನಲ್ಲಿ ಕೇಸ್ ನಡೆಯುತ್ತಿದೆ. 5 ಜನರಿಗೆ ಕೇರಳದಲ್ಲಿ ಲವ್ ಜಿಹಾದ್ ವಿಚಾರದಲ್ಲಿ ಶಿಕ್ಷೆಯಾಗಿದೆ. ಮೂರು ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಮಾಡಲಾಗಿದೆ. ಈಗ ಜಾಗೃತಿ ಮೂಡಿದೆ ಎಂದು ವಿವರಿಸಿದರು. 

ಶ್ರೀರಾಮ್ ಸೇನೆ ಲವ್ ಜಿಹಾದ್ ಗೆ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಹೆಲ್ಪ್ ಲೈನ್ ಆರಂಭಿಸಿದಾಗ ಸಾವಿರಕ್ಕೂ ಹೆಚ್ಚು ಕಾಲ್ ಬಂದಿದೆ. ತಂಡ ಮಾಡಿ ಅವರನ್ನ ಕರೆಯಿಸುವಲ್ಲಿ ಶೇ.70 ರಷ್ಟು ಯಶಸ್ವಿಯಾಗಿದ್ದೇವೆ. ಎರಡು ವರ್ಷದಲ್ಲಿ 13 ಲಕ್ಷದ 13 ಸಾವಿರ ಪ್ರಕರಣ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಅದರಲ್ಲಿ ಲವ್ ಜಿಹಾದ್ ನಲ್ಲಿಇದೆ, ಇದರಲ್ಲಿ ಅಪ್ರಾಪ್ತರಿದ್ದಾರೆ.  ಮರ್ಡರ್, ಮಾರಾಟ, ರೇಪ್ ಎಲ್ಲವೂ ಒಳಗೊಂಡಿದೆ ಎಂದರು. 

ಹಂಪಿಯಲ್ಲಿ ಇಸ್ರೇಲ್ ಮಹಿಳೆಯನ್ನ ಅತ್ಯಾಚಾರ ನಡೆದಿದೆ. ಆದರೆ ನೇಹಾ ಹಿರೇಮಠ್ ಗೆ 27 ಬಾರಿ ಕೊಲೆ ಮಾಡಲಾಯಿತು. ಸಿಎಂ ಮೂರೆ ತಿಂಗಳಲ್ಲಿ ಶಿಕ್ಷೆನೀಡುವುದಾಗಿ ಹೇಳಿದ್ದರು. ಆದು  ೧೦ ತಿಂಗಳು ಕಳೆದರೂ ಯಾವುದೇ ಕ್ರಮ ಜರುಗಿಲ್ಲ. ಸಿಎಂಗೆ ದಿಕ್ಕಾರ ಎಂದರು. 

ಮತಕ್ಕಾಗಿ ಮುಸ್ಲೀಂ ತುಷ್ಠೀಕರಣ ಮಾಡಲಾಗಿದೆ. ಪೊಲೀಸ್ ಠಾಣೆ ಮೇಲೆ ಬೆಂಕಿ ಹಚ್ಚಿದವರ ವಿರುದ್ಧ ಪ್ರಕರಣ ಹಿಂಪಡೆಯಲಾಗುತ್ತಿದೆ. ತುಗಲಕ್ ದರ್ಬಾರ್ ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ಸಮಾಜದ ಜಾಗೃತಿ ಆಗಬೇಕಿದೆ. 100 ಕಡೆ ತದರಿಶೂಲ್ ದಿಕ್ಷ ಕೊಡಲಾಗುತ್ತಿದೆ. 

ಮಹಿಳೆಯರಿಗೆ ದೈರ್ಯವಾಗಿ ಕಾಲೇಜು, ಮಾರಗಕೆಟ್ ಗೆ ಓಡಾಡಲು ತ್ರಿಶೂಲ ಹಂಚಲಾಗುತ್ತಿದೆ. ಮಹಿಳೆಯರ ಸುರಕ್ಷಿತಕ್ಕಾಗಿ ಕೆಲಸ ಮಾಡಿದ್ದೇವೆ. ಮುತಾಲಕ್ ರನ್ನ ತಡೆದಿದ್ದೇಕೆ? ಟೆರರಸ್ಟಾ? ರೇಪಿಸ್ಟಾ? ಐದು ಕಡೆ ಪುಸ್ತ ಬಿಡುಗಡೆಯಾಗಿದೆ ಅಲ್ಲಿ ಏನೂ ಆಗದ ಶಿವಮೊಗ್ಗದಲ್ಲಿ ನನ್ನನ್ನ ತಡೆಯಲಾಗಿದ್ದೇಕೆ ಎಂದು ಗುಡುಗಿದರು. 

ಆರ್ಡರ್ ತರದೆ ನನನ್ನ ತಡೆಯಲಾಗಿದೆ. ಇಳಿರಿ ಕೆಳಗೆ ಎಂದು ವರಟು ಮಾತನಾಡಿದ್ದಾರೆ. ಎಂತಹಂತವರನ್ನ ಬಜಾವ್ ಮಾಡುವ ಇಲಾಖೆ ನಮ್ಮನ್ನ ಹೀಗೆ ನಡೆಸುಕೊಳ್ಳುವುದಾ? ಡಿಸಿ ಎಸ್ಪಿ ಅವರೆ ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿಲ್ವಾ? ಔರಂಗ ಜೇಬ್ ಕಟೌಟ್ ಹಾಕಲು ಅವಕಾಶ ಮಾಡ್ತೀರಿ. ಅವರಿಗೆ ಯಾವುದೇ ಜೈಲ್ ಇಲ್ಲ.  ಹಿಂದೂ ಸಮಾಜಕ್ಕಾಗಿ ರಕ್ಷಿಸುವ ನಮಗೆ ನಿರ್ಲಕ್ಷಿಸುತ್ತೀರಿ ಎಂದು ಪ್ರಶ್ನಿಸಿದರು. 

ಬಿಜೆಪಿ ಸರ್ಕಾರವಿದ್ದಾಗಲೂ ಹಿಂದೂ ಹೆಣ್ಣುಮಕ್ಕಳಿಗೆ ದೌರ್ಜನ್ಯ ಬಡೆದಿದೆ ಆಗ ಖಂಡಿಸಿದ್ದೇನೆ. ಚಕ್ರವರ್ತಿ ಸೂಲಿಬೆಲೆಯ ಹೇಳಿಕೆಗೆ  ಬೆಂಬಲವಿದೆ. ಸೌಜನ್ಯ ಕೊಲೆ ಪ್ರಕರಣವನ್ನ ಖಂಡಿಸಿದವನು ನಾನು. ಅವರ ಕುಟುಂಬದ ವೇದಿಕೆಯಲ್ಲಿ ಪ್ರಕರಣವನ್ನ ಖಂಡಿಸಿ ಕುಟುಂಬಸ್ಥರಿಗೆ ಬೆಂಬಲ ಸೂಚಿಸಿದೆ ಎಂದರು.

ರಾಜ್ಯದಲ್ಲಿ ಎರಡೆರಡು ಕಾನೂನು ಇದೆ. ರನ್ಯ ರಾವ್ ಹಿಂದೆ ಪ್ರಭಾವಿ ರಾಜಕಾರಣ ಇದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಅದು ಯಾವುದೂ ಬೀದಿಗೆ ಬರೊಲ್ಲ. ಮುಚ್ಚಿಹೋಗುತ್ತದೆ ಎಂದು ಆರೋಪಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close