ಸಹ್ಯಾದ್ರಿ ಕಾಲೇಜಿನ ಕೆಮಿಸ್ಟ್ರಿ ಲ್ಯಾಬ್ ನ ವಸ್ತುಗಳ ಕಳವು-chemistry department lab of Sahyadri Science College

 suddilive || Shivamogga

The lock on the door of the chemistry department lab of Sahyadri Science College here was broken and materials used for research were stolen. A case was registered after the incident was reported to the higher authorities.

Sahadri collage, lab

ಇಲ್ಲಿನ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಲ್ಯಾಬ್‌ನ  ಬಾಗಿಲಿನ ಬೀಗ ಒಡೆದು ಸಂಶೋಧನೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ.

ಮಾ.12ರಂದು ಬೆಳಗ್ಗೆ ಸಿಬ್ಬಂದಿ ಲ್ಯಾಬ್‌ ಬಾಗಿಲು ತೆರೆಯಲು ಬಂದಾಗಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಮತ್ತು ಎಸ್ಟೇಟ್‌ ಆಫೀಸರ್‌ಗೆ ಮಾಹಿತಿ ನೀಡಲಾಗಿದೆ.

ಲ್ಯಾಬ್‌ನಲ್ಲಿದ್ದ (Lab) ಸೆಕ್ಷನ್‌ ಪಂಪ್‌, ಹಾಟ್‌ ಪ್ಲೇಟ್‌, ಮ್ಯಾಗ್ನೇಟಿಕ್‌ ಸ್ಟಿರರ್‌, ಬ್ಯೂರೆಟ್‌ ಸ್ಟಾಂಡ್‌ ರಾಡ್‌, ಐರನ್‌ ರಾಡ್‌, ಟ್ರೈಪ್ಯಾಡ್‌ ಸ್ವಾನ್‌ ನೆಕ್‌ ಟ್ಯಾಪ್‌, ಪ್ಲಾಸ್ಟಿಕ್‌ ಸ್ಟೂಲುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಘಟನೆ ಸಂಬಂಧ ಕೆಮಿಸ್ಟ್ರಿ ಲ್ಯಾಬ್‌ನ ಉಸ್ತುವಾರಿ ಡಾ. ಪ್ರಭಾಕರ್‌ ಚೌಹಾಣ್‌ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

chemistry department lab of Sahyadri Science College

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close