ಮೆಗ್ಗಾನ್ ನಲ್ಲಿದ್ಧ ವಿದ್ಯುತ್ ಕಂಬ ಕಳುವು ಆಗಿದ್ದು ಹೇಗೆ? it is a misuse of government property

Suddilive || Shivamogga

A case of theft of 15 electric poles that were left unattended at Meggan Hospital has come to light. Although the thieves admitted their mistake by saying they would return the electric poles, it is a misuse of government property.

Electic pole, theft



ಮೆಗ್ಗಾನ್ ಆಸ್ಪತ್ರೆಯಲ್ಲಿ ಬೇಡವಾಗಿ ಬಿಸಾಕಿದ್ದ 15 ವಿದ್ಯುತ್ ಕಂಬಗಳನ್ನ ಕಳುವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕದ್ದವರು ವಿದ್ಯುತ್ ಕಂಬಗಳನ್ನ ವಾಪಾಸ್ ಕೊಡುವುದಾಗಿ ಹೇಳುವ ಮೂಲಕ ತಪ್ಪು ಒಪ್ಪಿಕೊಂಡರೂ ಸರ್ಕಾರಿ ಆಸ್ತಿ ದುರುಪಯೋಗವಾಗಿದೆ.

ಈ ಹಿಂದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಟಾರ್ ರಸ್ತೆಗಳು ಇದ್ದಾಗ ಸಿಮೆಂಟ್ ರಸ್ತೆಗಳನ್ನಾಗಿ ಪರಿವರ್ತಿಸಿ 15 ವಿದ್ಯುತ್ ಕಂಬಗಳು ನಿರುಪಯುಕ್ತವಾಗಿದ್ದವು. ಅವುಗಳನ್ನ ಒಂದೆಡೆ ತೆಗೆದಿಡಲಾಗಿತ್ತು.

ಆದರೆ ಶನಿವಾರದಿಂದ ಈ ಕಂಬಗಳು ಕಾಣೆಯಾಗಿದ್ದವು. ಇವುಗಳು ಮಣ್ಣಲ್ಲಿ ಹೂತುಹೋಗಿದ್ದವು. ಆದರೆ ಇವು ಸರ್ಕಾರಿ ಆಸ್ತಿಯಾಗಿದ್ದರಿಂದ ಬೇರೆಡೆ ಬಳಕೆ ಮಾಡಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಲಿದೆ.

ಈ ಸುದ್ದಿ ಸಿಮ್ಸ್ ನ ಡೀನ್ ಡಾ.ವಿರುಪಾಕ್ಷಪ್ಪನವರ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖಾ ಆದೇಶವನ್ನ ಮೆಗ್ಗಾನ್ ಅಧೀಕ್ಷಕ ಡಾ.ತಿಮ್ಮಪ್ಪ ಹಾಗೂ ಡಿಎಸ್ ಡಾ.ಸಿದ್ದೇಗೌಡರಿಗೆ ತನಿಖೆಗೆ ಆದೇಶಿಸಿದ್ದಾರೆ. ಇಬ್ಬರು ತನಿಖಾಧಿಕಾರಿಗಳ ಎದುರು ಕದ್ದವರು ತಪ್ಪು ಒಪ್ಪಿಕೊಂಡಿದ್ದಾರೆ. 

ಸವರಾಜ್ ಔಟ್ ಸೋರ್ಸ್ ನ ಎಲೆಕ್ಟ್ರಿಷಿಯನ್ ಮತ್ತು ಖಾಯಂ ಎಂಪ್ಲಾಯ್ ಸಂತೋಷ್ ಈ 15 ಕಂಬಗಳನ್ನ ಹಿಂತಿರುಗಿಸುವುದಾಗಿ ಒಪ್ಪಿಕೊಂಡಿರುವುದಾಗಿ ತನಿಖಾಧಿಕಾರಿಗಳ ಎದುರು ಒಪ್ಪಿಕೊಂಡಿದ್ದಾರೆ. ಇದರಿಂದ ಕಳುವು ಪ್ರಕರಣ ಸುಖಾಂತ್ಯಗೊಂಡರೂ ಸರ್ಕಾರಿ ಆಸ್ತಿ ಕಳುವು ಒಂದು ಅಪರಾಧವೇ...

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close