Suddilive || Shivamogga
Residents of B. Block, a sheltered area in the city's Bomman Katte, have started cursing and cursing against the Shivamogga Drinking Water Supply and Municipal Corporation Board. They have fallen onto the streets holding empty water bottles.
ನಗರದ ಬೊಮ್ಮನ್ ಕಟ್ಟೆಯ ಆಶ್ರಯ ಬಡಾವಣೆಯ ಬಿ. ಬ್ಲಾಕ್ ನಿವಾಸಿಗಳು ಶಿವಮೊಗ್ಗ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಮಂಡಳಿಯ ವಿರುದ್ಧ ಹಿಡಿ ಶಾಪ ಹಾಕಲು ಆರಂಭಿಸಿದ್ದಾರೆ. ಖಾಲಿ ಕೊಡಪಾನ ಹಿಡಿದು ಬೀದಿಗೆ ಬಿದ್ದಾರೆ.
ನಗರದ ಬೊಮ್ಮನಕಟ್ಟೆ ವಾರ್ಡ್ ನಂಬರ್ ಒಂದರ ಆಶ್ರಯ ಬಡಾವಣೆ ಬಿ ಬ್ಲಾಕ್ ನಲ್ಲಿ ಸಾರ್ವಜನಿಕರು ನೀರಿನ ಅಭಾವದಿಂದ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ಎರಡು ತಿಂಗಳ ಹಿಂದೆ. ಗುಂಡಿಯನ್ನು ತೆಗೆಸಿ ರಿಪೇರಿ ಮಾಡಿಸಲಾಗಿತ್ತು. ಗುಂಡಿಯನ್ನು ಪರಿಶೀಲಿಸುವವರೆಗೂ ಮುಚ್ಚಬೇಡಿ ಎಂದು ಮಂಡಳಿಗೆ ಹೇಳಿದ್ದರು ಸಹ ಗುಂಡಿಯನ್ನು ಮುಚ್ಚಲಾಗಿದೆ. ಈ ಬಗ್ಗೆ ಮಂಡಳಿಯ ಇಂಜಿನಿಯರ್ ಜೀವನ್ ವಿರುದ್ಧ ಸಹ ಆಕ್ರೋಶ ವ್ಯಕ್ತವಾಗಿದೆ.
ಪೈಪ್ ಲೈನಿನ ಭಾಗದಲ್ಲಿ ಗುಂಡಿ ಅಗೆದು 10 ಅಡಿ ದೂರದಿಂದ ಒಂದೇ ಲೆವೆಲ್ ಮಾಡಿಕೊಂಡು ಬರಬೇಕು. ಆಗ ಈ ಬೀದಿಗೆ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಸಂಬಂಧಪಟ್ಟ ಇಂಜಿನಿಯರ್ ಜೀವನ್ ಹಾಗೂ ನೀರಿನ ಸಂಪರ್ಕದ ಸೂಪರ್ ವೇಜರ್ ಕೃಷ್ಣಮೂರ್ತಿ ಮತ್ತು 24x7 ನೀರಿನ ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡಿದ್ದರು ಸಹ ಈ ಬಗ್ಗೆ ತಲೆಕೆಡೆಸಿಕೊಳ್ಳದೆ ಗುಂಡಿಯನ್ನ ಮುಚ್ಚಿರುವುದು ಸ್ಥಳೀಯರು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಕೆಂಗಣ್ಣಿಗೆ ಗುರಿಯಾಗಿದೆ.
ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಯರದೇ ಇದ್ದಲ್ಲಿ ಉಗ್ರವಾದ ಹೋರಾಟವನ್ನು ಮಹಾನಗರ ಪಾಲಿಕೆಯ ಮುಂಬಾಗ ಹೋರಾಟ ಮಾಡಲಾಗುವುದೆಂದು ಈ ಮೂಲಕ ಸಂಘಟನೆ ಎಚ್ಚರಿಸಿದೆ. ಈ ಸಂದರ್ಭದಲ್ಲಿ. ಸ್ಥಳೀಯರಾದ ಗೋವಿಂದರಾಜ್. ಮತ್ತು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸಂತೋಷ್ ನಾಯಕ.ಪ್ರಶಾಂತ್. ಪ್ರಭಾಕರ್. ಜಯಲಕ್ಷ್ಮಿ. ಸರಸ್ವತಿ ಶಾಂತಮ್ಮ. ಭುವನೇಶ್ವರಿ ದ್ರಾಕ್ಷಾಯಿಣಿ ಮತ್ತು ವಾಣಿ. ಮೇರಿ . ಬಿ ಬ್ಲಾಕ್ ನ ನಿವಾಸಿಗಳು.ಎಲ್ಲರೂ ಸೇರಿ ಖಾಲಿ ಕೊಡಪಾನದಲ್ಲಿ ಪ್ರತಿಭಟಿಸಲಾಯಿತು
holding empty water bottles.