ಹಸು ರಕ್ಷಿಸಲು ಹೋಗಿ ಕೂಲಿ ಕಾರ್ಮಿಕ ಸಾವು!A laborer died while trying to save a cow!

Suddilive || Thirthahalli

ಹಸು ರಕ್ಷಿಸಲು ಹೋಗಿ ಕೂಲಿ ಕಾರ್ಮಿಕ ಸಾವು! A laborer died while trying to save a cow!

Labor, died
ಸಾಂಧರ್ಭಿಕ ಚಿತ್ರ

ಬಾವಿಗೆ ಬಿದ್ದಿದ್ದ  ಹಸುವನ್ನು  ಮೇಲೆತ್ತಲು ಇಳಿದಿದ್ದ ವ್ಯಕ್ತಿ ‌ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಕೋಣಂದೂರು ಸಮೀಪದ ಕಾರಕೊಡ್ಲು ಎಂಬಲ್ಲಿ  ಸಂಭವಿಸಿದೆ.

ಕೇರಳದ ಸತೀಶ (45) ಮೃತಪಟ್ಟ ವ್ಯಕ್ತಿ. ಕಾರ್ಕೊಡ್ಲುವಿನಲ್ಲಿ ರಾಘು ಎಂಬುವವರು ಇತ್ತೀಚೆಗೆ ರಿಂಗ್ ಬಾವಿ ನಿರ್ಮಿಸಿದ್ದರು. ಅದಕ್ಕೆ ಮಂಗಳವಾರ ಹಸುವೊಂದು ಆಕಸ್ಮಿಕವಾಗಿ ಬಿದ್ದಿತ್ತು. ಅದನ್ನು ರಕ್ಷಿಸಲು ಸತೀಶ್ ಬಾವಿಗೆ ಇಳಿದಿದ್ದಾಗ ಈ ದುರ್ಘಟನೆ ನಡೆದಿದೆ.

ಸತೀಶ್ ಮತ್ತು ಹಸುವಿನ ಮೃತದೇಹವನ್ನು ಅಗ್ನಿಶಾಮಕ ದಳದವರು ಬುಧವಾರ ಬಾವಿಯಿಂದ ಸಿಬ್ಬಂದಿ ಮೇಲಕ್ಕೆ ತೆಗೆದರು. ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ – ಮರಣೋತ್ತರ ಪರೀಕ್ಷೆ ನಡೆಸಿ ಸತೀಶ್ ಅವರ ಮೃತದೇಹವನ್ನು ಕೇರಳಕ್ಕೆ ಕಳುಹಿಸಿಕೊಡಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

laborer died while trying to save a cow!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close