suddilive || shivamogga
ವಿದ್ಯುತ್ ಕಂಬ ಕಳುವು ಪ್ರಕರಣಕ್ಕೆ ಹೊಸ ಟ್ವಿಸ್ಟ್-electric poles thrown away at the Megan Hospital taken new turn
ಮೆಗ್ಗಾನ್ ಆಸ್ಪತ್ರೆಯಲ್ಲಿ ಬೇಡವಾಗಿ ಬಿಸಾಕಿದ್ದ ವಿದ್ಯುತ್ ಕಂಬಗಳನ್ನೇ ಕಳುವು ಮಾಡಿದ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಕಂಬಗಳನ್ನ ವಾಪಾಸ್ ತಂದಿಡುವ ಮೂಲಕ ಸುಖಾಂತ್ಯಕಂಡಿದೆ.
ಈ ಹಿಂದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಟಾರ್ ರಸ್ತೆಗಳು ಇದ್ದಾಗ ಸಿಮೆಂಟ್ ರಸ್ತೆಗಳನ್ನಾಗಿ ಪರಿವರ್ತಿಸಿದ ವೇಳೆ ವಿದ್ಯುತ್ ಕಂಬಗಳ ಹೈಟ್ ಕಡಿಮೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕಡೆ ತೆರೆದಿರಿಸಲಾಗಿತ್ತು.
ಆದರೆ ಶನಿವಾರದಿಂದ ಈ ಕಂಬಗಳು ಕಾಣೆಯಾಗಿದ್ದವು. ಇವುಗಳು ಮಣ್ಣಲ್ಲಿ ಹೂತುಹೋಗಿದ್ದವು. ಆದರೆ ಇವು ಸರ್ಕಾರಿ ಆಸ್ತಿಯಾಗಿದ್ದರಿಂದ ಬೇರೆಡೆ ಹೋಗಿದ್ದು ಎಲ್ಲಿ ಎಂಬ ಹುಡುಕಾಟ, ಗುಮಾನಿಗಳು ಹುಟ್ಟುಕೊಂಡಿದ್ದವು.
ಈ ಸುದ್ದಿ ಸಿಮ್ಸ್ ನ ಡೀನ್ ಡಾ.ವಿರುಪಾಕ್ಷಪ್ಪನವರ ಗಮನಕ್ಕೆ ಬಂದಿತ್ತು. ಈ ಬಗ್ಗೆ ತನಿಖಾ ಆದೇಶವನ್ನ ಮೆಗ್ಗಾನ್ ಅಧೀಕ್ಷಕ ಡಾ.ತಿಮ್ಮಪ್ಪ ಹಾಗೂ ಡಿಎಸ್ ಡಾ.ಸಿದ್ದೇಗೌಡರಿಗೆ ತನಿಖೆಗೆ ಆದೇಶಿಸಿದ್ದರು.
ಈ ಕಂಬಗಳಲ್ಲಿ ಬಹುತೇಕ ಕಂಬಗಳು ವಾಪಾಸಾಗಿವೆ. ಈ ಬಗ್ಗೆ ಆರೋಪವೆತ್ತಿಕೊಂಡ ಖಾಯಂ ನೌಕರ ಸಂತೋಷ್ ಸಹ ಸುಖಾಸುಮ್ಮನೆ ನನ್ನ ಹೆಸರು ಈ ಪ್ರಕರಣದಲ್ಲಿ ಸಿಲುಕಿಕೊಂಡಿದೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಆಸ್ತಿ ವಾಪಾಸಾಗಿದೆ. ಇದಕ್ಕೆ ಸುರಕ್ಷತೆ ಹೆಚ್ಚಬೇಕಿದೆ.
electric poles thrown away at the Megan Hospital taken new turn