Make trip free for male passengers-ಗಂಡಸಿರಿಗೂ ಉಚಿತ ಪ್ರಯಾಣ ನೀಡಿ, ಇಲ್ಲ ಕಾನೂನು ಹೋರಾಟ ಎದುರಿಸಿ

Suddilive || Sagara

Make trip free for male passengers under shakthi Yojana. ಪುರುಷರಿಗೂ ಸ್ತ್ರೀಯರಂತೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ಮನವಿ

Free Trip,

ಸ್ತ್ರೀಯರಂತೆ ಪುರುಷರಿಗೂ ಅವಕಾಶ ಮಾಡಿಕೊಡುವಂತೆ ಸಾಗರದ ವಕೀಲರೊಬ್ಬರು ಮುಖ್ಯಕಾರ್ದರ್ಶಿಗಳಿಗೆ ಮತ್ತು ಸಾರಿಗೆ ಇಲಾಖೆಯ ಸರ್ಕಾರಿ ಪ್ರಧಾನಕಾರ್ಯದರ್ಶಿಗಳಿಗೆ ಮನವಿ ನೀಡಿದ್ದಾರೆ.  

 ಕರ್ನಾಟಕ ಸರ್ಕಾರವು ಸರ್ಕಾರಿ ಸ್ವಾಮ್ಯದ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆ ಎಂಬ ಯೋಜನಡೆಯಡಿ ರಾಜ್ಯದಂತ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ಸ್ವಾಗತರ್ಹ, 

ಆದರೆ ಭಾರತ ಸಂವಿಧಾನದ 14 ನೇ ವಿಧಿಯ ಪ್ರಕಾರ ಲಿಂಗ ತಾರತಮ್ಯವಾಗಿರುತ್ತದೆ. ಇದು ಯಾವ ಮಾನದಂಡವು ಇಲ್ಲದೆ ಮಹಿಳೆ ಎಂಬ ಮಾತ್ರಕ್ಕೆ ಯೋಜನೆಯನ್ನು ನೀಡಿ ಪುರಷರನ್ನು ಕಡೆಗಣಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ತನ್ನ ಎಲ್ಲಾ ಸಾರಿಗೆ ನಿಗಮಗಳಿಗೆ ಉಲ್ಲೇಖದಂತೆ ಉಚಿತವಾಗಿ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದು, ಆದರೆ ಹಣ ಕೊಟ್ಟ ಪುರುಷರು ನಿಂತುಕೊಂಡು ಪ್ರಯಾಣಿಸುವಂತಾಗಿದೆ. ಇದು ಎಲ್ಲಾ ಪುರುಷ ಪ್ರಯಾಣಿಕರಿಗೆ ಆಗುತ್ತಿರುವ ಅನುಭವವಾಗಿದೆ, ಈ ಮೂಲಕ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.

ಆದ್ದರಿಂದ ತಾವುಗಳು ಕೂಡಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತವಾಗಿ ಓಡಾಡುವ ಶಕ್ತಿ ಯೋಜನೆಯನ್ನು ಜಾರಿಗೊಳಿಸುವಂತೆ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಒಂದೊಮ್ಮೆ ಇದು ಸರ್ಕಾರದಿಂದ ಸಾಧ್ಯವಾಗದಿದ್ದಲ್ಲಿ ಸೂಕ್ತ ನ್ಯಾಯಾಲಯದಲ್ಲಿ ನಿಮ್ಮನ್ನು ಪಾರ್ಟಿಯನ್ನಾಗಿ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಈ ಮೂಲಕ ತಿಳಿಯಪಡಿಸುತ್ತೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close