Suddilive || Shivamogga
Even though the government has enacted a law prohibiting finance companies from coming to your doorstep to collect debts, the menace of finance companies has not diminished. This incident continues in the rural areas of Shivamogga.
ಫೈನಾನ್ಸ್ ನವರು ಮನೆ ಬಾಗಿಲಿಗೆ ಬಂದು ವಸೂಲಿ ಮಾಡದಂತೆ ಸರ್ಕಾರ ಕಾನೂನು ರಚಿಸಿ ಆದೇಶಿಸಿದರೂ ಫೈನಾನ್ಸ್ ನವರ ಹಾವಳಿ ಮಾತ್ರ ಕಡಿಮೆಯಾಗಿಲ್ಲ. ಶಿವಮೊಗ್ಗದ ಗ್ರಾಮಾಂತರ ಬಾಗದಲ್ಲಿ ಈ ಘಟನೆ ಮುಂದುವರೆದಿದೆ.
ಶಿವಮೊಗ್ಗದ ಹಾಯ್ ಹೊಳೆ ಗ್ರಾಮದ ಭಾರತಿ ನಗರದ ತಿರುಪತಿ ಎಂಬುವರ ಮನೆ ಮುಂದೆ ಫೈನಾನ್ಸ್ ಸಂಸ್ಥೆಯ ಇಬ್ಬರು ಸಿಬ್ಬಂದಿಗಳು ಬಂದು ವಸೂಲಿಗಾಗಿ ಬಂದಿರುವ ವಿಡಿಯೋ ಲಭ್ಯವಾಗಿದೆ. ತಿರುಪತಿಯವರು 80 ಸಾವಿರ ರೂ ಸಾಲ ಮಾಡಿದ್ದರು.
80 ಸಾವಿರಕ್ಕೆ ಎರಡು ಕಂತು ಕಟ್ಟದೆ ಇರುವ ಹಿನ್ನಲೆಯಲ್ಲಿ ಇಂದು ಇಬ್ಬರು ಸಿಬ್ಬಂದಿಗಳು ಮನೆಯ ಮುಂದೆ ನಿಂತಿದ್ದಾರೆ. ಗ್ರಾಮಸ್ಥರು ಅವರೊಂದಿಗೆ ಮಾತುಕತೆ ನಡೆಸಿದರೂ ಫೈನಾನ್ಸ್ ನವರು ಎರಡು ಇಂಚು ಕದಲದೆ ಇರುವುದು ಬೆಳಕಿಗೆ ಬಂದಿದೆ.
ಮನೆ ಬಾಗಿಲಿಗೆ ಬಂದು ವಸೂಲಿಗೆ ಇಳಿಯದಂತೆ ಕಾನೂನು ಇದ್ದರೂ ಕಾನೂನನ್ನ ದಿಕ್ಕರಿಸಿ ಮನೆಯ ವಾಗಿಲ ಮುಂದೆ ಫೈನಾನ್ಸ್ ನವರು ವರ್ತಿಸುತ್ತಿದ್ದಾರೆ ಎಂಬುದು ಸ್ಥಳೀಯರ ವಾದ. ಬಿಎನ್ ಎಸ್ ಫೈನಾನ್ಸ್ ನ ಸಿಬ್ವಂದಿ ಎಂದು ತಿಳಿದು ಬಂದಿದೆ