ರೌಡಿ ಶೀಟರ್ ಅಶ್ಪಕ್ ಸೇರಿದಂತೆ ಐವರ ವಿರುದ್ಧ ದೂರು ದಾಖಲು-more than five people including rowdy sheeter Ashpak complaint lodged

 suddilive || Shivamogga

A complaint has been filed against more than five people, including rowdy sheeter Ashpak, in connection with an incident in Chikkala, Shimoga, where a married man staged a protest in front of his house, alleging that he could not find a young woman.

Rowdy Aspak, shivamogga
ರೌಡಿ ಅಶ್ಪಕ್

ಶಿವಮೊಗ್ಗದ ಚಿಕ್ಕಲ್ ವೊಂದರಲ್ಲಿ ಮದುವೆಯಾದ ವ್ಯಕ್ತಿಗೆ ಯುವತಿ ಸಿಗಲಿಲ್ಲವೆಂದು ಆರೋಪಿಸಿ ಮನೆಯ ಮುಂದೆ ದಾಂದ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ರೌಡಿಶೀಟರ್ ಅಶ್ಪಕ್ ಸೇರಿದಂತೆ ಐದಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿದೆ. 

ರೌಡಿ ಶೀಟರ್ ಅಶ್ಪಕ್ ಎ2, ಪ್ರೇಮಿ ಜಾಫರ್ ಎ1,  ಯಾಸ್ಮಿನ್ ಎ3, ಸುನೈನಾ ಎ4, ಮುಜಾಹಿದ್ ಎ5 ಹಾಗೂ ಇತರೆ ಮೂವರು ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ನಿನಗೆ ಮದುವೆಯಾಗಿದೆ. ನನ್ನ ಪಾಡಿಗೆ ನನನ್ನ ಬಿಟ್ಟುಬಿಡು ಎಂದು ಯುವತಿ ಕೇಳಿದ್ದಕ್ಕೆ ಎಂಕೆಕೆ ರಸ್ತೆಯ ರೌಡಿ ಶೀಟರ್ ಅಶ್ವಕ್ ಗೊತ್ತು, ಹೆಚ್ಚು ಕಮ್ಮಿಯಾದರೆ ಯಾಸಿನ್ ರೀತಿಯಲ್ಲೇ ಮರ್ಡರ್ ಆಗುತ್ತೀರಿ ಎಂದು ಯುವತಿಯ ಕುಟುಂಬಕ್ಕೆ ಧಮ್ಕಿ ಹಾಕಿರುವುದು ತಿಳಿದು ಬಂದಿದೆ. 

ಚಿಕ್ಕಲ್ ನಲ್ಲಿದ್ದ ಯುವತಿ ಮಾಚೇನಹಳ್ಳಿಯ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಯುವತಿಗೆ ಆರ್ ಎಂ ಎಲ್ ನಗರದ ಜಾಫರ್ ಪರಿಚಯವಾಗುತ್ತಾನೆ. ಪರಿಚಯ 6 ತಿಂಗಳಿಂದ ಇದ್ದಿದ್ದು, ಯುವತಿಗೆ ಬರುವ ಹಣವನ್ನ ಕಿತ್ತುಕೊಂಡು ಸಂಬಂಧ ಇಟ್ಟುಕೊಂಡಿದ್ದ. 

ಯಾವಾಗ ಮದುವೆಯಾಗು ಎಂದು ಯುವತಿಗೆ ಕೇಳುತ್ತಾನೆ ಆಗ ನಿನಗೆ ಮದುವೆಯಾಗಿದೆ ಜಾಫರ್ ಮಕ್ಕಳಿದ್ದಾರೆ, ನಿನ್ನ ಜೊತೆ ಸಂಬಂಧ ಬೆಳೆಸಲು ಸಾಧ್ಯವಿಲ್ಲವೆಂದಿದ್ದಕ್ಕೆ ರೌಡಿ ಶೀಟರ್ ಅಶ್ವಕ್, ಪತ್ನಿ ಯಾಸ್ಮಿನ್ ಮೂವರು ಮಕ್ಕಳೊಂದಿಗೆ ಚಿಕ್ಕಲ್ ನ ಯುವತಿ ಮನೆಯೊಳಗೆ ನುಗ್ಗಿ ಯುವತಿಯನ್ನ ಥಳಿಸಿದ್ದಾನೆ. 

ಈ ವೇಳೆ ಯುವತಿಯ ಚಿನ್ನಾಭರಣಗಳನ್ನ ಕಿತ್ತುಕೊಂಡಿರುವುದು ಬೆಳಕಿಗೆ ಬಂದಿದೆ. ರೌಡಿ ಅಶ್ವಕ್ ನಮಗೆ ಬಹಳ ಬೇಕಾದವನು, ಹೊರಗಡೆಯೋಗಿ ನಮ್ಮ ವಿರುದ್ಧ ದೂರು ನೀಡಿದರೆ ಯಾಸಿನ್ ಗೆ ಆದ ಗತಿಯೇ ನಿಮಗೆ ಆಗಲಿದೆ. ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. 

ಈ ಪ್ರಕರಣ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣ ಒಂದು ವಾರದ ಕೆಳಗೆ ನಡೆದಿದ್ದು, ನಿನ್ನೆ ಎಫ್ ಐ ಆರ್ ದಾಖಲಾಗಿದೆ

more than five people including rowdy sheeter Ashpak complaint lodged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close