ಅಪರಿಚಿತ ಡ್ರೋನಗಳ ಹಾರಟ- An unidentified drone

Suddilive || shivamogga

An unidentified drone has been circling in the villages of Sagar taluk, Shimoga district, raising curiosity among the people.

An unidentify, drone


ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಹಳ್ಳಿಗಳಲ್ಲಿ ಅನಾಮಧೇಯ ಡ್ರೋನ್ ಗಿರಕಿ ಹೊಡೆಯುತ್ತಿದ್ದು ಜನರಿಗೆ ಕುತೂಹಲ ಮೂಡಿಸಿದೆ ಕೆಲವರು ಡ್ರೋನ್ ಕುರಿತಾಗಿ ಹಲವು ಅನುಮಾನಗಳನ್ನ ವ್ಯಕ್ತಪಡಿಸುತ್ತಿದ್ದಾರೆ. 

15 ದಿನಗಳ ಹಿಂದೆ ತಾಳಗುಪ್ಪ ಭಾಗದಲ್ಲಿ ಈ ಡ್ರೋಣ್ ಕಂಡಾಗ ಜ‌ನ ಗುರುತು ಪರಿಚಯ ಇದ್ದವರ ಬಳಿ ಹೇಳಿದರು. ಆದರೆ ಇದರ ವಿವರ ಸಿಗಲಿಲ್ಲ. ನಂತರ ಸಾಗರ ಪಟ್ಟಣ  ಸೇರಿದಂತೆ ಹಲವೆಡೆ ಡ್ರೋಣ್ ಹಾರಾಟ ನಡೆದಿದೆ. ಆದರೂ ಸಹ ಅಧಿಕಾರಿಗಳು ತುಟಿ ಪಿಟಿಕ್ ಎಂದಿಲ್ಲ. 

ಸಹಜವಾಗಿ ಜನರಲ್ಲಿ ಕುತೂಹಲದ ಜೊತೆ ಆತಂಕ ಉಂಟಾಗಿದೆ.  ಗುರುವಾರ ಮಧ್ಯಾಹ್ನ ತ್ಯಾಗರ್ತಿ ಮಂಡಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾರಾಟ ನಡೆಸಿರುವ ಈ ಡ್ರೋಣ್ ಅಲ್ಲೊಂದಿಷ್ಟು ಜನರನ್ನ ಗೊಂದಲಕ್ಕೀಡುಮಾಡಿದೆ. ಬಹಳ ಮಜಾ ಅಂದ್ರೆ ಆ ಭಾಗದ ಜಂಬಿಟ್ಟಿಗೆ ಕಲ್ಲು ಕ್ವಾರಿ ಕೆಲಸಗಾರರು ಕಕ್ಕಾಬಿಕ್ಕಿಯಾಗಿದ್ದಾರೆ. ಹೀಗೆ ಹೊರಟ ಡ್ರೋಣ್ ಮೂರ್ನಾಲ್ಕು ಸಲ ಸುತ್ತಾಡಿ ಮಾಯವಾಗಿದೆ.

ಈ ಕುರಿತು ಸಾಗರದ ತಹಸೀಲ್ದಾರ್ ಕೇಳಿದರೆ DDLR ನಿಂದ ಲೆಟರ್ ಬಂದಿತ್ತು. ಅವರೇನೋ ಸರ್ವೇ ಮಾಡುತ್ತಿದ್ದಾರೆಂದು ಹೇಳಿದರು. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ಬಳಿ ವಿಚಾರಿಸಿದಾಗ ಅವರಲ್ಲಿ ಇದರ ಮಾಹಿತಿಯೇ ಇಲ್ಲ ಎಂಬುದು ಅಚ್ಛರಿಗೆ ಕಾರಣವಾಯಿತು.

ಇವೆಕ್ಕೆಲ್ಲಾ ತಿಲಾಂಜಲಿ ಇಟ್ಟ ಶಿವಮೊಗ್ಗ DDLR ಆಶಾ ಕುಮಾರಿ, ಇದು ಕೇಂದ್ರದ ಸಹಯೋಗದೊಂದಿಗೆ ರಾಜ್ಯ ಭೂಮಾಪನ ಇಲಾಖೆ ನಡೆಸುತ್ತಿರುವ ಸರ್ವೇಯಾಗಿದೆ. ಇದರಿಂದ ಜನ ಆತಂಕಪಡುವ ಅಗತ್ಯ ಇಲ್ಲ. ಸ್ವತಂತ್ರ ಬಂದ ನಂತರ ಈ ತರಹದ ಕರಾರುವಾಕ್ಕಾದ ಸರ್ವೇ ಸಮರ್ಪಕವಾಗಿಲ್ಲ. ಜನ ಕಂದಾಯ ಕಟ್ತಾರೆ, ಖಾತೆ ಇದೆ ಆದರೆ ಸರ್ವೇ ಸ್ಕೆಚ್ ಸರಿಯಾಗಿಲ್ಲ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಜನವಸತಿ ಸರ್ವೇಕ್ಷಣೆ ಮಾಡಲಾಗುತ್ತಿದೆ

An unidentified drone

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close