ಶಿವಮೊಗ್ಗದಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ-Dismal response to Karnataka bandh in Shivamogga

Suddilive || Shivamogga

ಶಿವಮೊಗ್ಗದಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ-Dismal response to Karnataka bandh in Shivamogga     

Dismal, karnataka bandh


ಕನ್ನಡಪರ ಸಂಘಟನೆಗಳಿಂದ ಅಖಿಲ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ, ಮಲೆನಾಡು ನಗರಿ ಶಿವಮೊಗ್ಗದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ದೊರೆತಿದೆ. ಶಿವಮೊಗ್ಗದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಜನ ಜೀವನ ಎಂದಿನಂತೆ ಸಾಗಿದೆ. 

ನಗರ ಸಾರಿಗೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಗಳ ಸಂಚಾರ ಎಂದಿನಂತೆ ಸಾಗಿವೆ. ಈಗಾಗಲೇ ಯಾವುದೇ ಸಂಘಟನೆಗಳು ಪ್ರತಿಭಟನೆ ನಡೆಸುವ ಜವಬ್ದಾರಿಯನ್ನ ಹೊತ್ತಿಲ್ಲದ ಕಾರಣ ಎಂಇಎಸ್ ಪುಂಡಾಟವನ್ನ ಖಂಡಿಸಿ ಕರೆದ ಕರ್ನಾಟಕ ಬಂದ್ ಶಿವಮೊಗ್ಗದಲ್ಲಿ ಸಂಪೂರ್ಣ ವಿಫಲವಾಗಿದೆ. 

ಆಟೋ ಹಾಗೂ ಇತರೆ ಸಾರಿಗೆ ವಾಹನಗಳ ಸಂಚರದಲ್ಲೂ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ನಾಲ್ಕನೇ ಶನಿವಾರದ ಕಾರಣ ಕೆಲ ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್ ಗಳು ರಜೆಯಾಗಿವೆ. ಹಾಗೂ ದೈನಂದಿನ ಕೆಲಸಗಳಿಗೆ ಇಂದಿನಂತೆ ಜನ ತೆರಳುತ್ತಿದ್ದಾರೆ. ಬಂದ್ ಗೆ ಪ್ರತಿಕಯೆ ಇ ಲ್ಲದ ಕಾರಣ ವಿದ್ಯಾರ್ಥಿಗಳು  ಶಾಲೆಗಳಿಗೆ ತೆರಳುತ್ತಿರುವ ದೃಶ್ಯಗಳು ಲಭಿಸಿದೆ‌. 

ಜಿಲ್ಲಾ ಕೇಂದ್ರದ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣದಿಂದ ಎಂದಿನಂತೆ  ಬಸ್ ಗಳ ಓಡಾಡುತ್ತಿರುವುದು ಕಂಡುಬಂದಿದೆ. ಒಟ್ಟಿನಲ್ಲಿ ಶಿವಮೊಗ್ಗದಲ್ಲಿ ಕರ್ನಾಟಕ ಬಂದ್ ವಿಫಲವಾಗಿದೆ. 

Dismal response to Karnataka bandh in Shivamogga     


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close