ಅಕ್ರಮ ಮರಳುದಂಧೆ ಕೋರರು+ಅಧಿಕಾರಗಳು= ಸಂಪನ್ಮೂಲ ನಾಶ-sand mining in Shivamogga

 Suddilive || Shivamogga

Albert Einstein's formula for energy, E=mc², is revealed. But even though the sand mining in Shivamogga is a formula for total plunder, we and the common people have lost the power to save it.

Sand Mining, plunder

E=mc² ಎಂಬ ಆಲ್ಬರ್ಟ್ ಐನ್ ಸ್ಟೀನ್ ಶಕ್ತಿಯ ಮೂಲ ಸೂತ್ರವನ್ನ ಬಿಚ್ಚಿಡುತ್ತಾನೆ. ಆದರೆ ಶಿವಮೊಗ್ಗದ ಅಕ್ರಮ ಮರಳುದಂಧೆ ಎಂಬುದು ಸಂಪೂನ್ಮೂಲದ ಲೂಟಿಯ ಸೂತ್ರವಾದರೂ ನಮಗೂ ಮತ್ತು ಜನಸಾಮಾನ್ಯನಿಂದ ಉಳಿಸಿಕೊಳ್ಳುವ ಶಕ್ತಿ ಕಳೆದುಕೊಂಡು ಬಿಟ್ಟಿದ್ದೇವೆ. ಕಾರಣ ಗಣಿ ಮತ್ತು ಭೂವಿಜ್ಞಾನ ಇಲಾಖೆ. ಅದು ಹೇಗೆ ಎಂಬುದನ್ನ ವಿವರಿಸುತ್ತಾ ಹೋಗುತ್ತೇನೆ. ಓದಿ.

ತುಂಗೆಯ ಒಡಲನ್ನ ಬಗೆಯುವ ಮರಳು ದಂಧೆಕೋರರು ಕಾನೂನೂ ಕಾಯ್ದೆಗಳೆಲ್ಲ ಗಾಳಿಗೆ ತೂರಿ ನಡೆಸುತ್ತಿದ್ದರೂ ಇಲಾಖೆ ನಿದ್ರಾವ್ಯವಸ್ಥೆಯಲ್ಲಿದೆ. ಕೇಳಿದರೆ ನಾವೇ ಅತಿಹೆಚ್ಚು ದಾಳಿ ಮಾಡಿ ದಂಡ ವಸೂಲಿ ಮಾಡುತ್ತಿದ್ದೇವೆ ಎಂಬ ಸಮ್ಜಾಯಿಷಿ ದೊರೆಯುತ್ತಿದೆ. ಇಲ್ಲಿ ಬೇರೆ ತಾಲೂಕು ಬೇಡ ಶಿವಮೊಗ್ಗವನ್ನೇ ತೆಗೆದುಕೊಳ್ಳಿ, 

ತುಂಗ ನದಿಯ ಪಾತ್ರಕ್ಕೆ ಸೇರಿಕೊಂಡಿರುವ ಶಿವಮೊಗ್ಗದ ಗ್ರಾಮಾಂತರ ಭಾಗದ ಪ್ರತಿ ಗ್ರಾಮದಲ್ಲಿ ಹೊಳೆಯ ಒಡಲಿನಲ್ಲಿ ಜೆಸಿಬಿಗಳನ್ನ ಇಳಿಸಲಾಗುತ್ತದೆ. ತುಂಗೆಯ ಒಡಲನ್ನ ಬಗೆದು ಮರಳನ್ನ ಎತ್ತಲಾಗುತ್ತದೆ. ಇದನ್ನ ಕಾಯುವ ಇಲಾಖೆ ಜಾಣ ನಿದ್ರೆಗೆ ಜಾರಿದೆ. 


ಈ ಇಲಾಖೆಗೆ ಹಾಡೋನಹಳ್ಳಿ ಬಿಟ್ಟರೆ ಬೇರೆ ಊರಿನಲ್ಲಿ ದಾಳಿ ನಡೆಸಿದ್ದ ಉದಾಹರಣೆಯೇ ಸಿಗುವುದಿಲ್ಲ. ಈ ಊರಿಗೆ ಹೋಗಿ ಹೋಗಿ ದೂರು ದಾಖಲಿಸಿಕೊಂಡು ಬಂದಿದ್ದು ಬಿಟ್ರೆ ಬೇರೆ ಊರುಗಳು ಇಲಾಖೆಯ ಕಣ್ಣಿಗೆ ಕಾಣಲೇ ಇಲ್ಲ.  ಹಾಗಾಗಿ ಈ ಇಲಾಖೆಯೆ ಮರಳು ದಂಧೆಕೋರರಿಗೆ ಶ್ರೀರಕ್ಷೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. 

ಅಕ್ರಮ ಮರಳು ತಡೆಯುವ ವಿಚಾರದಲ್ಲಿ  ಇತ್ತೀಚೆಗೆ ಸರ್ಕಾರಿ ಮಹಿಳಾ ಅಧಿಕಾರಿಗಳ ಮೇಲೆ ಬೈಯಲಾಯಿತು. ಮಾಧ್ಯಮಗಳಲ್ಲಿ ಪ್ರಚಾರವಾದಾಗ ಒಂದು ದೂರು ದಾಖಲಾಯಿತು. ಆದರೆ ಒಂದು ಎಫ್ಐಆರ್ ಸಹ ಕೈಗೆ ಸೇರದಂತೆ ವ್ಯವಸ್ಥೆ ಮಾಡಲಾಯಿತು. ಹಾಗಾಗಿ ನ್ಯಾಯ, ನೀತಿ ಕಾನೂನುಗಳೆಲ್ಲ ಇರೋದು ಮುರಿಯೋಕೆ ವಿನಃ ಪಾಲಿಸುವುದಕ್ಕೆ ಅಲ್ಲವೆಂಬುದನ್ನ ಇಲಾಖೆಯಿಂದ ಕಲಿಯಬೇಕಿದೆ.

ಹೊಳಲೂರಿನ ಜಾಕ್ ವೆಲ್ ಹಿಂಭಾಗದಲ್ಲಿರುವ ಸಿದ್ಲೀಪುರದ ಭೂಪಾಳಂ ಎಸ್ಟೇಟ್ ನಲ್ಲಿ ಅವ್ಯವಹತವಾಗಿ ಮರಳುಗಾರಿಕೆ ನಡೆಯುತ್ತಿದೆ. ಈ ಮರಳುಗಾರಿಕೆಯ ಬಗ್ಗೆ ಕೇಳಿದರೆ ಪರವಾನಗಿ ಇದೆ ಎಂಬ ಮಾತನ್ನ ಅಧಿಕಾರಿಗಳು ಹೇಳುತ್ತಾರೆ. ಈ ಮರಳುಗಾರಿಕೆ ಪರವಾನಗಿ ಇದ್ದರೂ ಕಾನೂನು ಬದ್ಧವಾಗಿ ಪಾಲಿಸುವಲ್ಲಿ ಗುತ್ತಿಗೆದಾರ ಯಡವಿದ್ದಾನೆ. ಸ್ಥಳದಲ್ಲಿ ಸಿಸಿ ಟಿವಿ ಫೂಟೇಜ್ ಹಾಕಿಸುವುದು. ಮರಳು ಸ್ಟಾಕ್ ಯಾರ್ಡ್ ಗಳ ಪ್ರತ್ಯೇಕ ಮಾಡಿಡುವ ವಿಚಾರದಲ್ಲಿ ಯಡವಿದ್ದಾನೆ. ವೇಯಿಂಗ್ ಮಿಷಿನ್ ಗಳೆ ಕಾಣೊಲ್ಲ. ಆತನ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. 

ಈ ಮರಳುಗಾರಿಕೆಗೆ ಲೈಸೆನ್ಸ್ ಇಲ್ಲ ಮುಂದಕ್ಕೆ ಇರುವ ನಾಗಸಮುದ್ರದ ಮರಳುಗಾರಿಕೆಗೆ ಲೈಸೆನ್ಸ್ ಇದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಇಲ್ಲೂ ಸಹ ಅದೇ ಹಣಬರಹ. ಆದರೆ ಇಲಾಖೆಗೆ ಇವೆಲ್ಲ ಕಾನೂನು ಬಾಹಿರ ಅಂತ ಅನಿಸಲೇ ಇಲ್ಲ. 

ಹೀಗೆ ಶಿವಮೊಗ್ಗ ತಾಲೂಕಿನಲ್ಲಿ ತುಂಗೆಯ ಒಡಲು ಬಗೆಯುವ ದಂಧೆಕೋರರು ಮತ್ತು ಅಧಿಕಾರಿಗಳ ಪಿಕ್ ಅಂಡ್ ಚೂಸ್ ದಾಳಿ ಮುಂದುವರೆದಿದೆ. ಸಂಪನ್ಮೂಲಗಳನ್ನ ಲೂಟಿ ಹೊಡೆಯಲಾಗುತ್ತಿದೆ. ಮರಳುಕೋರರು+ಅಧಿಕಾರಗಳು= ಸಂಪನ್ಮೂಲ ನಾಶ ಎಂದು ಹೇಳಬಹುದಿದೆ. 

sand mining in Shivamogga is a formula for total plunder

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close