Suddilive || Shiralkoppa
ರಸ್ತೆ ಅಪಘಾತ, 10 ಕುರಿಗಳು ಸಾವು, ಕುರಿಗಾಹಿಗಳಿಗೂ ಗಾಯ -10 sheep killed, shepherds injured in road accident
ಖಾಸಗಿ ಬಸ್ ಮತ್ತು ಟಾಟಾ ಏಸ್ ವಾಹನ ಡಿಕ್ಕಿಯಾಗಿ ಐವರು ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಪಿಕಪ್ ವಾಹನದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ನರಸಾಪುರ ಸಮೀಪ ಇಂದು ಸಂಜೆ ಘಟನೆ ಸಂಭವಿಸಿದೆ.
ಶಿರಾಳಕೊಪ್ಪದ ಕಡೆಯಿಂದ ಹೋಗುತ್ತಿದ್ದ ಖಾಸಗಿ ಬಸ್ಸು( ಕೆಎ 18 ಬಿ 2289), ಚಿಕ್ಕೇರೂರು ಕಡೆಯಿಂದ ಬರುತ್ತಿದ್ದ ಕುರಿಗಾಹಿಗಳ ಟಾಟಾ ಏಸ್ ವಾಹನ(ಕೆಎ 35 ಬಿ 8115) ಡಿಕ್ಕಿಯಾಗಿವೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಏನೂ ಹಾನಿ ಉಂಟಾಗಿಲ್ಲ ಮತ್ತು ಟಾಟಾ ಏಸ್‌ನಲ್ಲಿದ್ದ ನಾಲ್ವರು ಕುರಿಗಾಹಿಗಳಿಗೆ ಗಾಯಗೊಂಡಿದ್ದಾರೆ
ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದೆ. ಟಾಟಾ ಏಸ್ ಸಂಪೂರ್ಣ ಹಾನಿಗೀಡಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪಿಕಪ್ ವಾಹನ ಚಾಲಕ ಮಂಜು, ಶಾಂತಮ್ಮ, ಶಿವಮ್ಮ ಎಂಬುವರು ಮತ್ತು ಇಬ್ಬರು ಮಕ್ಕಳು ಗಾಯಗಳಾಗಿದ್ದಾರೆ.
10 sheep killed in road accident