ರಾಜ್ಯಕ್ಕೆ ರಘುನಾಥ್, ಜಿಲ್ಲೆಗೆ ರಘುರಾಮ್-Raghunath for the state

 Suddilive || Shivamogga

ರಾಜ್ಯಕ್ಕೆ ರಘುನಾಥ್, ಜಿಲ್ಲೆಗೆ ರಘುರಾಮ್ -Raghunath for the state, Raghuram for the district

Raghubath, state


ರಾಜ್ಯಕ್ಕೆ ರಘುನಾಥ್,  ಜಿಲ್ಲೆಗೆ ರಘುರಾಮ್ ಗೆದ್ದು ಬೀಗಿದ್ದಾರೆ. ರಾಜ್ಯದಲ್ಲಿ ರಘುನಾಥ್ ಗೆದ್ದಿರುವ ಅಂತರದ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ. ಈ ಹಿಂದಿನ ಅಧ್ಯಕ್ಷರಾಗಿದ್ದ ಅಶೋಕ್ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ಭಾನುಪ್ರಕಾಶ್ ಶರ್ಮರನ್ನ ಸೋಲಿಸಿ ರಘುನಾಥ್ ಗೆದ್ದು ಬೀಗಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ರಾಜ್ಯ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದ ರಘುರಾಮ್ ಗೆದ್ದು ಬೀಗಿದ್ದಾರೆ. ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಘುನಾಥ್ ಜಯ ಸಾಧಿಸಿದ್ದಾರೆ. 


ಜಿಲ್ಲೆಯಲ್ಲಿ ಭಾನುಪ್ರಕಾಶ್ ಶರ್ಮರಿಗೆ 14 ಮತಗಳು ರಘುನಾಥ್ ರ ವಿರುದ್ಧ ಲಭಿಸಿದರೂ ಸಹ ರಾಜ್ಯದಲ್ಲಿ  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭದ ಅಧ್ಯಕ್ಷರಾಗಿ ರಘುನಾಥ್ ಗೆಲವು ಸಾಧಿಸಿದ್ದಾರೆ. ಶಿವಮೊಗ್ಗದಲ್ಲಿ ರಘುನಾಥ್ ಗೆ 780 ಮತಗಳು ಲಭಿಸಿದರೆ ಭಾನು ಪ್ರಕಾಶ್ ಶರ್ಮರಿಗೆ 794 ಮತ ಲಭಿಸಿದೆ. 

ಶಿವಮೊಗ್ಗದಲ್ಲಿ 3440 ಮತಗಳಿದ್ದರೂ ಇದರ 50% ಮಾತ್ರ ಚಲಾವಣೆಯಾಗಿದೆ. ಭಾನುಪ್ರಕಾಶ್ ಅವರ ಬೆಂಬಲಿತ ಅಭ್ಯರ್ಥಿ ಎಲ್ ಟಿ ತಿಮ್ಮಪ್ಪ ಹೆಗಡೆ ಅವರಿಗೆ 721 ಮತಗಳು ಲಭಿಸಿದರೆ ರಘುನಾಥ್ ಅವರ ಬೆಂಬಲಿತ ಅಭ್ಯರ್ಥಿಗೆ 852 ಮತಗಳು ಲಭಿಸಿದೆ. ಇದರಿಂದ ರಘುರಾಮ್ 131 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. 

Raghunath for the state

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close