ವಿದೇಶದಲ್ಲಿ ಶಿವಮೊಗ್ಗದ ಮಹಿಳೆ ಬಲಿ-A woman from Shimoga died abroad due to malaria

Suddilive || Africa || Shivamogga

ಮಲೇರಿಯಾಕ್ಕೆ ವಿದೇಶದಲ್ಲಿ ಶಿವಮೊಗ್ಗದ ಮಹಿಳೆ ಬಲಿ-A woman from Shimoga died abroad due to malaria.

Malaria, shimoga

ಆಫ್ರಿಕದ ಗಿನಿಯಲ್ಲಿ ಮಲೇರಿಯಾದಿಂದ ಶಿವಮೊಗ್ಗದ ಹಕ್ಕಿಪಿಕ್ಕಿಯ ಮಹಿಏಯೊಬ್ಬಳು ಅಸುನೀಗಿದ್ದಾರೆ.  ಆಕೆಯ ಮೃತ ದೇಹವನ್ನ ಭಾರತಕ್ಕೆ ತರಲು ಕುಟುಂಬಸ್ಥರು ಪರದಾಡುವಂತಾಗಿದೆ. 

ಶಿವಮೊಗ್ಗ ಜಿಲ್ಲೆಯ ಮಲ್ಲಿಗೇನಹಳ್ಳಿ ಬಳಿಯ ತುಂಗಾ ಚಾನಲ್ ಪಕ್ಕದ ಹಕ್ಕಿಪಿಕ್ಕಿ ಕ್ಯಾಂಪ್ ನ ಶಮೀಲಾ (41) ಮೃತಪಟ್ಟ ಮಹಿಳೆಯಾಗಿದ್ದಾರೆ. ಕಳೆದ ಏಪ್ರಿಲ್ 8ರಂದು ಆಫ್ರಿಕಾದ ಆಸ್ಪತ್ರೆಗೆ ಶಮೀಲಾ ದಾಖಲಾಗಿದ್ದರು. 

ಚಿಕಿತ್ಸೆ ಫಲಕಾರಿಯಾಗದೆ  ಶಮೀಲಾ ಸಾವನ್ಬಪ್ಪಿದ್ದಾರೆ. ಆಸ್ಪತ್ರೆಯ  3 ಲಕ್ಷ ಬಿಲ್ ಕಟ್ಟಲಾಗದೆ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಒಟ್ಟಿನಲ್ಲಿ ಮಲೇರಿಯಾಕ್ಕೆ ವಿದೇಶದಲ್ಲಿ ಶಿವಮೊಗ್ಗದ ಮಹಿಳೆ ಬಲಿಯಾದಂತಾಗಿದೆ. 

ಮೂರು ಲಕ್ಷ ಪಾವತಿಸದ ಹಿನ್ನೆಲೆ ಮೃತದೇಹ ನೀಡಲು ಆಸ್ಪತ್ರೆ ಸಿಬ್ಬಂದಿಗಳು ನಿರಾಕರಿಸುತ್ತಿರುವುದಾಗಿ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. 

ಮೃತ ದೇಹ ಭಾರತಕ್ಕೆ ತರಲು ಭಾರತೀಯ ರಾಯಭಾರಿ ಕಚೇರಿಗೆ ಕುಟುಂಬಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.  ಒಂದು ತಿಂಗಳ ಹಿಂದೆ ಆಫ್ರಿಕಾಗೆ ಗಿಡಮೂಲಿಕೆಗಳನ್ನ ಮಾರಲು ಶಮೀಲಾ ತೆರಳಿರುವುದಾಗಿ ತಿಳಿದು ಬಂದಿದೆ. 

A woman from Shimoga died abroad due to malaria.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close