ಡ್ರ್ತಾಗರ್ ಹಿಡಿದವರಿಗೆ ಬಿತ್ತು ಕೇಸ್-The person who caught the dragger was charged with a case

 Suddilive || Shivamogga

 ಡ್ರಾಗರ್ ಹಿಡಿದವರಿಗೆ ಬಿತ್ತು ಕೇಸ್-The person who caught the dragger was charged with a case.

Dragger, social media


ಡ್ರಾಗರ್ ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಡಾನ್ ಎಂದು ಬರೆದುಕೊಂಡಿದ್ದ ಇಬ್ವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಶಕ್ಕೆ ಪಡೆದವರನ್ನ ಅಸ್ಗರ್ ಅಲಿ ಮತ್ತು ತಬ್ರೇಜ್ ಅಹ್ನದ್ ಎಂದು ಗುರುತಿಸಲಾಗಿದೆ.

ಈ ಇಬ್ಬರು ಯುವಕರು ಡ್ರಾಗರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಝಳಪಿಸುವಂತೆ ಫೋಸ್ ಕೊಟ್ಟಿಕೊಂಡು ಇನ್ ಸ್ಟಾಗ್ರಾಮ್ ಗೆ ಹರಿಬಿಟ್ಟಿದ್ದರು. ಈ ವಿಡಿಯೋ ಸಾರ್ವಜನಿಕರನ್ನ ಭಯ ಬೀಳಿಸುವಂತೆ ಮಾಡಿದೆ ಎಂಬ ಆರೋಪದ ಅಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದರು. 


ಅಸ್ಗರ್ ಅಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸಿವೆ ಹಳ್ಳಿ ಗ್ರಾಮದ ಯುವಕನಾಗಿದ್ದರೆ ತಬ್ರೇಜ್ ಅಲಿ ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಜನತಾಕಾಲೋನಿಯ ನಿವಾಸಿಯಾಗಿದ್ದಾನೆ. ಇಬ್ವರಿಗೂ 19 ವರ್ಷದ ವಯಸ್ಸಾಗಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಇಬ್ಬರಿಗೂ ನೋಟೀಸ್ ನೀಡಿದ ಖಾಕಿಪಡೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

The person who caught the dragger was charged with a case.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close