Suddilive || Shivamogga
ಪದವೀಧರರ ಸಹಕಾರ ಸಂಘಕ್ಕೆ ಹಾನಿ ಉಂಟು ಮಾಡಿದವನ ವಿರುದ್ಧ ದೂರು-Complaint against person who caused damage to Graduates' Cooperative Society
ಶಿವಮೊಗ್ಗದ ಪದವೀದರ ಸಹಕಾರ ಸಂಘದ ಪ್ರಭಾರ ಕಾರ್ಯದರ್ಶಿಗಳಿಂದ ನಾಗಪ್ಪ ಎಂಎಸ್ ಎಂಬುವರ ವಿರುದ್ಧ ಪಿಸಿಆರ್ ಮೂಲಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಗಪ್ಪ ಎಂಬುವರು ಉದ್ದೇಶಪೂರಕವಾಗಿ ಆಡಳಿತ ಮಂಡಳಿ ತೆಗೆದುಕೊಳ್ಳುವ ನಿರ್ಣಯ, ಸಂಘದ ಏಳಿಗೆ, ಅಭಿವೃದ್ಧಿ, ಸುಧಾರಣಾ ಕಾರ್ಯಕ್ರಮಗಳನ್ನ ವಿರೋಧಿಸುತ್ತಿದ್ದಾರೆ. ಸಂಘದ ತಪ್ಪುಗಳನ್ನೇ ಹುಡುಕಿ ಸಂಘದ ಹಿತರಕ್ಷಕನಂತೆ ಸಂಘದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಲೆಕ್ಕಪರಿಶೋಧಕರ ಮೇಲೆ ಸುಳ್ಳು ಆಪಾದನೆಗಳನ್ನ ಮಾಡುತ್ತಿದ್ದಾರೆ. ಇದರ ಮೂಲಕ ಒತ್ತಡವನ್ನ ಹೇರಲಾಗುತ್ತಿರುವ ಆರೋಪವನ್ನ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಘಕ್ಕೆ ಭೇಟಿ ನೀಡಿ ಸಂಘದ ಪ್ರತಿನಿತ್ಯದ ವ್ಯವಹಾರಗಳಲ್ಲೂ ಮೂಗುತೂರುತ್ತಿದ್ದಾರೆ. ಹೀಗೆ ಮಾಡಿದರೆ ಸಂಘವನ್ನ ಸಿಬ್ಬಂದಿಗಳು ಆಡಳಿತ ಮಂಡಳಿಯವರು ದಿವಾಳಿ ಮಾಡುತ್ತಾರೆ ಎಂಬ ಅನುಮಾನದ ಆರೋಪವನ್ನೂ ಮಾಡುತ್ತಿದ್ದಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
ಈ ಹಿನ್ನಲೆಯಲ್ಲಿ 2018-19, 2019-2020 ನೇ ಸಾಲಿನ ಮೂಲ ಆಡಿಟ್ ಕೊಡುವಂತೆ ಒತ್ತಡಹಾಕಿ ಕಚೇರಿಯಲ್ಲಿ ಅಶಾಂತಿ ಮೂಡಿಸುವ ವಾತಾವರಣ ಸೃಷ್ಠಿಸಿದ್ದಾರೆ. ಸಹಕಾರಿ ಸಂಘದ ಮೇಲಾಧಿಕಾರಿಗಳಿಗೆ ಸುಳ್ಳು ಆರೊಪಮಾಡಿ ಸುಳ್ಳು ಸಾಕ್ಚಿ, ಸುಳ್ಳು ದಾಖಲೆಗಳನ್ನ ಸೃಷ್ಠಿಸಿ ಅಧಿಕಾರಿಗಳುಬನಂಬುವಂತೆ ಮಾಡಿ ಸಂಘಕ್ಕೆ ಭೌತಿಕ ಮತ್ತು ಆರ್ಥಿಕ ಹಾನಿ ಮಾಡಿರುವುದಾಗಿ ಸಂಘದ ಪ್ರಭಾರ ಕಾರ್ಯದರ್ಶಿಗಳು ದೂರು ದಾಖಲಿಸಿದ್ದಾರೆ.
Graduates' Cooperative Society