ಪತ್ರಿಕಾ ಭವನದಲ್ಲಿ ಅಂಬೇಡ್ಕರ್ ಅವರ 134 ನೇ ಜಯಂತಿ ಆಚರಣೆ-Ambedkars 134th birth anniversary

 Suddilive || Shivamogga

ಪತ್ರಿಕಾ ಭವನದಲ್ಲಿ ಅಂಬೇಡ್ಕರ್ ಅವರ 134 ನೇ ಜಯಂತಿ ಆಚರಣೆ-Ambedkars 134th birth anniversary celebration at Patrika Bhavan

Ambedkar, jayanthi

ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ 134 ನೇ ಅಂಬೇಡ್ಕರ್ ಜಯಂತಿಯನ್ನ ಆಚರಿಸಲಾಯಿತು.  ಕಾರ್ಯಕ್ರಮವನ್ನ ಎಂಎಲ್ ಸಿ ಬಲ್ಕಿಸ್ ಬಾನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಇರಲಿಲ್ಲವೆಂದಿದ್ದರೆ ಜಂಗಲ್ ರಾಜ್ ಆಗುತ್ತಿತ್ತು. ಪ್ರಪಂಚದಲ್ಲಿ ಉತ್ತಮ ಸಂವಿಧಾನ ನಮ್ಮ ದೇಶದ್ದಾಗಿದೆ. ಸಂವಿಧಾನ ಬದಕುವ ಹಕ್ಕು ನೀಡಿದೆ. ಅದನ್ನ ರಚಿಸಿದವರು ಅಂಬೇಡ್ಕರ್ ಅವರು ಎಂದರು. 

ಸ್ವಾತಂತ್ರ್ಯದ ನಂತರ ದೇಶ ಹೇಗೆ ಸಾಗಬೇಕು , ರಾಜಕೀಯ ಶಿಕ್ಷಣವಾಗಿ ಸರ್ವಜನರನ್ನ ಹೇಗೆ ಕರೆದುಕೊಂಡು ಹೋಗಬೇಕು ಎಂಬುದನ್ನ ಅಂಬೇಡ್ಕರ್ ಅವರು  ಸಂವಿಧಾನದ ಮೂಲಕ ನೀಡಿದ್ದಾರೆ. ಅವರ ಜಯಂತಿ ಆಚರಣೆ ಅರ್ಥಪೂರ್ಣವೆಂದರು.

ನಂತರ ಮಾತನಾಡಿದ ಕಾರಗಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಅಧ್ಯಾಯನದ ಮೂಲಕ ಸಙವಿಧಾನ ರಚಿಸಿದರು. ನಾಗರೀಕ ಸಮಾಜದಲ್ಲಿ ಅವರ ಸಂವಿಧಾನ ಅರಿಯದೆ ಮುಂದೆ ಸಾಗುತ್ತಿರುವುದು ದುರದುಷ್ಟಕರ ಎಂದರು. 

ಅಧಿಕಾರಿಗಳು, ಸಿಬ್ಬಂದಿಗಳು ನಮ್ಮನ್ನ ದಿಕ್ಕು ತಪ್ಪಿಸುತ್ತಿದ್ದೇವೆ. ನಮ್ಮನ್ನ ಜಾತಿ ಆಧಾರಿತವಾಗಿಯೇ ಇನ್ನೂ ಬಡಿದಾಡಿಕೊಳ್ಳುತ್ತಿದ್ದೇವೆ ಆದರೆ ಸರ್ಕಾರಕ್ಕೆ ಕಟ್ಟಿರುವ ತೆರಿಗೆ ಎಲ್ಲಿ ಹೋಗುತ್ತಿದೆ. ಹೇಗೆ ವ್ಯಯವಾಗುತ್ತಿದೆ ಎಂಬುದನ್ನ ಗಮನಿಸುತ್ತಿಲ್ಲ ಎಂದು ವಿವರಿಸಿದರು. 

Ambedkars 134th birth anniversary 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close