ಹುಬ್ಬಳ್ಳಿ ಕೃತ್ಯಕ್ಕೆ ಎನ್ ಕೌಂಟರೇ ಉತ್ತರ-ಸಚಿವ ಮಧು ಬಂಗಾರಪ್ಪ-EnCounter is the answer to the Hubballi incident

 suddilive || Shivamogga

 ಹುಬ್ಬಳ್ಳಿ ಕೃತ್ಯಕ್ಕೆ ಎನ್ ಕೌಂಟರೇ ಉತ್ತರ-ಸಚಿವ ಮಧು ಬಂಗಾರಪ್ಪ -EnCounter is the answer to the Hubballi incident - Minister Madhu Bangarappa

Encounter, hubballi

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರದ ಕೃತ್ಯ ಖಂಡನೀಯ, ಅತ್ಯಾಚಾರಿಗೆ ಕಠಿಣ ಶಿಕ್ಷೆ ಕೊಡಬೇಕಿದೆ.  ಅದು ಎನ್ ಕೌಂಟರ್ ರೂಪದಲ್ಲಿ ನೀಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ವಿಚಾರ ಬಂದಾಗ ಎಲ್ಲರೂ ಇಂತಹ ಕೆಲಸಗಳನ್ನ ಖಂಡಿಸಬೇಕು. ಕೇವಲ ಕಾನೂನು ಪಾಲಿಸುವುದು ಒಂದೇ ಅಲ್ಲ. ಸಾರ್ವಜನಿಕರು ಜವಬ್ದಾರಿ ಮೆರೆಯಬೇಕಿದೆ. ಯಾರೇ ಕಾರ್ಮಿಕರು ರಾಜ್ಯಕ್ಕೆ ಬಂದರೆ ಕಾನೂನು ಚೌಕಟ್ ರೂಪಿಸಬೇಕಿದೆ. ಅಕೌಂಟಬಲಿಟಿ ಇರಬೇಕಿದೆ ಎಂದರು. 

ರಾಜ್ಯದಲ್ಲಿ ಈ ಕಾರ್ಯಕ್ರಮವನ್ನ ಜಾರಿಗೆ ತರೋಣ. ಚರ್ಚಿಸಿ ನಂತರ ರಾಜ್ಯಕ್ಕೆ ಜಿಲ್ಲೆಗೆ ಯಾರು ಬಂದರು ಹೋದರು ಎಂಬ ಅಕೌಂಟಬಿಲಿಟಿ ಇರಲಿ ಎಂದರು. ಮೈಗ್ರೇಷನ್  ಕಾನೂನು ಈ ಹಿಂದೆಯೇ ಜಾರಿಯಾಗಿದೆ. 

ಜಾತಿಗಣತಿ ವಿಚಾರದಲ್ಲಿ ಅಸಮಾಧಾನವಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಅನುಷ್ಠಾನವಾಗಿಲ್ಲ. ಚರ್ಚೆ ನಡೆಯುತ್ತಿದೆ. ಏನಾದರೂ ಸರಿಯಲ್ಲವೆಂದರೆ ಮತ್ತೆ ಲೆಕ್ಕ ತೆಗೆದುಕೊಂಡು  ಸರಿ ಮಾಡಿದರೆ ಆಯ್ತು. ಕ್ಯಾಬಿನೆಟ್ ನಲ್ಲಿ ಚರ್ಚಿಸೋಣ. ಇದು ಅಂತಿಮವಲ್ಲ ಎಂದು ಕಾನೂ ಸಚಿವರು ಹೇಳಿದ್ದಾರೆ. ಅವರ ಹೇಳಿಕೆಯನ್ನ ಸಮರ್ಥಿಸಿಕೊಳ್ಳಲಿದ್ದೇವೆ ಎಂದರು.

ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ಪಠ್ಯ ಪುಸ್ತಕ ಸಿದ್ದವಿದೆ. ದ್ವಿತೀಯ ಪಿಯುಸಿ ಫಲಿತಾಂಶ ಡೌನ್ ಫಾಲ್ ಆಗಿದೆ.  ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ ಇದೆ. ಎರಡು ಮತ್ತು ಮೂರನೇ ಪರೀಕ್ಷೆಗೆ ಶುಲ್ಕ ಇರೊದಿಲ್ಲ. ಏ.29 ರಿಂದ ಮೇ2 ರವರೆಗೆ ಪರೀಕ್ಷೆ ನಡೆಯಲಿದೆ. ಆಫ್ರಿಕಾದಲ್ಲಿ ಶಿವಮೊಗ್ಗದ ಮಹಿಳೆ ಸಾವಾಗಿದೆ. ಮೂರು ಲಕ್ಷ ರೂ. ಸಮಸ್ಯೆಯಿಂದ ಮೇತ ದೇಹದ ಸಮಸ್ಯೆಯಿದೆ ಎಂದು ಈಗ ನನ್ನ ಗಮನಕ್ಕೆ ಬಂದಿದೆ. ಅದನ್ನ ವಿದೇಶಾಂಗ ಸಚಿವಾಲಯ ನೋಡಿಕೊಳ್ಳಲಿದೆ ಎಂದರು. ಮಕ್ಕಳು ಸಂವಿಧಾನ ಪೀಠಿಕೆ ಓದುವ ವ್ಯವಸ್ಥೆ ಜಾರಿ ಬರುತ್ತಿದೆ ಎಂದರು. 

EnCounter is the answer to the Hubballi incident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close