Suddilive || Shivamogga
One-day training for Haj pilgrims from four districts
ನಗರದ ಮದಾರಿ ಪಾಳ್ಯದಲ್ಲಿರುವ ಹೆವೆನ್ ಪ್ಯಾಲೆಸ್ ನಲ್ಲಿ ಶಿವಮೊಗ್ಗ, ಹಾಸನ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯಿಂದ ಹಜ್ ಯಾತ್ರಿಗಳಿಗೆ ಒಂದು ದಿನದ ತರಬೇತಿಯನ್ನ ಏರ್ಪಡಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಂ ಎಲ್ ಸಿ ಬಲ್ಕಿಸ್ ಬಾನು, ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಜಿಲ್ಲಾ ಸಮಿತಿ ರವಿಸಲಾಗಿದೆ. ನನನ್ನು ಜಿಲ್ಲಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಾಲ್ಕು ಜಿಲ್ಲೆಯಿಂದ 583 ಯಾತ್ರಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಿದ್ದಾರೆ ಎಂದರು.
ಹೆಲ್ತ್ ಕಾರ್ಡ್ ಕೊಟ್ಟರೆ ಮಾತ್ರ ಹಜ್ ಯಾತ್ರೆಗೆ ಅವಕಾಶ, ನಮ್ಮ ಜಿಲ್ಲೆಯಲ್ಲಿ ನಾಲ್ಕು ಜಿಲ್ಲೆಯರಿಗೆ ತರಬೇತಿ ನೀಡಲಾಗುತ್ತಿದೆ.ಇಸ್ಲಾಂ ಧರ್ಮದಲ್ಲಿ ಹೇಗಿದೆ ಹಾಗೆ ಪಾಲಿಸಲಾಗುತ್ತಿದೆ. ಏ.15 ರಂದು ಬೆಳಿಗ್ಗೆ 10-30 ರಿಂದ 11 ಗಂಟೆಯ ವರೆಗೆ ವೇದಿಕೆ ಕಾರ್ಯಕ್ರಮವಾಗಿದೆ. ಸಚಿವ ಮಧು ಬಂಗಾರಪ್ಪ ನವರು ಭಾಗಿಯಾಗಲಿದ್ದಾರೆ ಎಂದರು.
ಇದು ಧರ್ಮಧಾರಿತ ತರಬೇತಿಯಾಗಿದೆ. ಹೆಲ್ತ ಸಮಿತಿ, ಆಹಾರ ಸಮಿತಿ ಸೇರಿ 7 ಸಮಿತಿಯಿದೆ. 30 ವೈದ್ಯರಿರುತ್ತಾರೆ. ಡಿಸಿ ನೇತೃತ್ವದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆಯಲಿದೆ. 4 ಲಕ್ಷ ರೂ ಯಾತ್ರಿಗೆ ತಗುಲಲಿದೆ. ಹಣಕಾಸಿನ ಸವಲತ್ತಿರುವವರು ಹಜ್ ಮಾಡಬೇಕಿದೆ. ಇದಕ್ಕೆ ಸಬ್ಸಿಡಿ ಇರೊಲ್ಲ. ಶಿಬಿರಕ್ಕೆ ಆಗಮಿಸುವ ತರಬೇತುದಾರರು ಬೆಂಗಳೂರಿನಿಂದ ಬರುತ್ತಾರೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಎನ್ ಕೌಂಟರ್ ಸ್ವಾಗತಾರ್ಹ
ಎನ್ ಕೌಂಟರ್ ನ್ನ ಎಂಎಲ್ ಸಿ ಬಲ್ಕಿಸ್ ಬಾನು ಸಮರ್ಥಿಸಿಕೊಂಡಿದ್ದಾರೆ ಕಾಲಿಗೆ ಹೊಡೆಯಲು ಹೋಗಿ ಎದೆಗೆ ತಗುಲಿದೆ. ಐದು ವರ್ಷದ. ಬಾಲಕಿಗೆ ಅಂತಹ ಸ್ಥಿತಿ ಹೊಂದಿದ್ದಾನೆ. ಹೊರ ರಾಜ್ಯದಿಂದ ಬಂದವರು ಇಂತಹ ಕಾರ್ಯ ಮಾಡಿದ್ದಾರೆ. ದೇವರ ಇಚ್ಛೆಯಿಂದ ನಡೆದಿದೆ.
ಹೊರ ರಾಜ್ಯದಿಂದ ಬರುವವರನ್ನ ನಿಂತ್ರಿಸಲು ಯೋಚಿಸಕಾಗುತ್ತಿದೆ. ಕೆಲ ಏಜೆಂಟ್ಸ್ ನ ಮೂಲಕ ಬರ್ತಾಯಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಲಿದೆ ಎಂದರು.
One-day training for Haj pilgrims