Suddilive || Shivamogga
ರಸ್ತೆ ಅಪಘಾತ ತಡೆಗಟ್ಟಲು ಪೊಲೀಸರಿಂದ ಜಾಗೃತಿ ಅಭಿಯಾನ-awareness campaign Police launch awareness campaign to prevent road accidents
ಪೊಲೀಸ್ ಇಲಾಖೆ ಜನರ ರಕ್ಷಣೆ ಹಾಗೂ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದೆ.ಜನ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರಿಗೆ ಅನೇಕ ರೀತಿಯ ಅಭಿಯಾನ ಹಾಗೂ ಅರಿವು ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಮೂಡಿಸುತ್ತಿದೆ.ಇಂತಹ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಹೀಗಾಗಿ ರಿಪ್ಪನ್ ಪೇಟೆ ಪೊಲೀಸರು ಸೂಡೂರು ಅಪಘಾತ ವಲಯದಲ್ಲಿ ಯಶಸ್ವಿಯಾದ ರೀತಿಯಲ್ಲಿಯೇ ಮತ್ತೊಂದು ವಿನೂತನ ಜಾಗೃತಿ ಕಾರ್ಯಕ್ಕೆ ಕೋಡೂರಿನ ಶಾಂತಪುರದಲ್ಲಿ ಕೈ ಹಾಕಿದ್ದಾರೆ.ಇತ್ತೀಚೆಗೆ ಹಲವು ಅಪಘಾತ ನಡೆಯುತ್ತಿರುವ ಕೋಡೂರು ಬಳಿಯ ಶಾಂತಪುರ ಗ್ರಾಮದ ಬಳಿಯಲ್ಲಿ ರಿಪ್ಪನ್ ಪೇಟೆ ಪೊಲೀಸ್ ಹಾಗೂ ಕೋಡೂರು ಗ್ರಾಪಂ ಸಹಯೋಗದಲ್ಲಿ ಅಪಘಾತ ವಲಯಗಳಲ್ಲಿ ರಿಫ್ಲೆಕ್ಟರ್ ರೇಡಿಯಂ, ಸೂಚನಾ ಫಲಕವನ್ನು, ಅಳವಡಿಸುವುದರ ಮೂಲಕ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ರಿಪ್ಪನ್ ಪೇಟೆಯ ಪಿಎಸ್‌ಐ ಪ್ರವೀಣ್ ಎಸ್ ಪಿ ಮತ್ತು ಸಿಬ್ಬಂದಿಗಳ ಹಾಗೂ ಕೋಡೂರು ಗ್ರಾಪಂ ಆಡಳಿತ ಮಂಡಳಿಯವರು ಮಂಗಳವಾರ ಮಧ್ಯಾಹ್ನದಿಂದ ಶಾಂತಪುರ ಸುತ್ತಮುತ್ತಲಿನ ಅಪಘಾತ ವಲಯದಲ್ಲಿ ಸುಮಾರು ಆರಕ್ಕೂ ಹೆಚ್ಚು ಸೂಚನಾ ಫಲಕ ಹಾಗೂ ರಸ್ತೆ ಬದಿಯಲ್ಲಿನ ಮರಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸಲಾಯಿತು.
ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಮತ್ತು ಅವರ ಸಿಬ್ಬಂದಿ ವರ್ಗ ಮಾಡುತ್ತಿರುವ ಈ ಸಮಾಜಮುಖಿ ಕಾರ್ಯವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಉಮೇಶ್ , ವಿಕ್ಟರ್ , ನಾಗೇಶ್ ಕೋಡೂರು ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ , ಮಾಜಿ ಅಧ್ಯಕ್ಷರಾದ ಉಮೇಶ್ ಸೇರಿದಂತೆ ಇನ್ನಿತರರಿದ್ದರು.
ಸೂಡೂರಿನಲ್ಲಿ ಯಶಸ್ವಿಯಾದ ರಿಪ್ಪನ್ ಪೇಟೆ ಪೊಲೀಸರ ಜಾಗೃತಿ ಅಭಿಯಾನ
ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಡೂರು ತಿರುವು ಕಳೆದ ಒಂದು ವರ್ಷಗಳ ಹಿಂದೆ ಅಪಘಾತಗಳಿಗೆ ಹೆಸರು ವಾಸಿಯಾಗಿತ್ತು.ಪ್ರತಿ ತಿಂಗಳಿಗೆ ಹಲವಾರು ಅಪಘಾತ ನಡೆಯುತ್ತಲೇ ಇತ್ತು.ಅದೆಷ್ಟೋ ಕುಟುಂಬಗಳು ಅನಾಥವಾಗಿತ್ತು.ಈ ದಿಸೆಯಲ್ಲಿ ಅಪಘಾತ ತಡೆಯಲು ಒಂದು ವರ್ಷದ ಹಿಂದೆ ರಿಪ್ಪನ್ ಪೇಟೆ ಪೊಲೀಸ್ ಇಲಾಖೆ ವಿಶಿಷ್ಟ ರೀತಿಯಲ್ಲಿ ಕಾರ್ಯೋನ್ಮುಖರಾಗಿ ರಿಫ್ಲೆಕ್ಟರ್ ರೇಡಿಯಂ, ಸೂಚನಾ ಫಲಕವನ್ನು, ಅಳವಡಿಸಿದ್ದರು.ಆ ನಂತರದಲ್ಲಿ ಆ ವಲಯದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಅಪಘಾತವಾಗಿರುವ ಬಗ್ಗೆ ವರದಿಯಾಗಿಲ್ಲ .. ಇದಲ್ಲವೇ ನಿಜವಾದ ಜಾಗೃತಿ ಕಾರ್ಯಕ್ರಮ..!!