Suddilive || Shivamogga
ಬಸವೇಶ್ವರ ಭಾವಚಿತ್ರದೊಂದಿಗೆ ರಾಜಭೀದಿ ಉತ್ಸವ -Rajabheedi utsav with Basaveshwara portrait
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಸಂಜೆ ಕುವೆಂಪು ರಂಗಮಂದಿರದಲ್ಲಿ ವಿಶ್ವಮಾನವ, ಮಹಾನ್ ಮಾನವತಾವಾದಿ, ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮ ನೆರವೇರಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ ಹಾಗೂ ಜಿಲ್ಲಾಡಳಿತ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನದಿಂದ ವಿಜೃಂಭಣೆಯಿಂದ ಪೂಜೆ ಸಲ್ಲಿಸಿ ಬಸವೇಶ್ವರ ಭಾವಚಿತ್ರದೊಂದಿಗೆ ಗಾಂಧಿ ಬಜಾರ್ ನೆಹರು ರಸ್ತೆ ಮುಖಾಂತರ ಕುವೆಂಪು ರಂಗಮಂದಿರಕ್ಕೆ ಮೆರವಣಿಗೆ ತಲುಪಿತು.
ವೀರಗಾಸೆ, ಡೊಳ್ಳು ಕುಣಿತ, ಕರಡಿ ಮಜಲು ಹಾಗೂ ಭಜನಾ ತಂಡಗಳೊಂದಿಗೆ ರಾಜಭೀದಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು.ಸಮಾಜದ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಕಾರ್ಯದರ್ಶಿ ಎಸ್.ಪಿ.ದಿನೇಶ್, ಹೆಚ್.ಸಿ.ಯೋಗೀಶ್, ಡಿ.ಎಂ.ಶಂಕರಪ್ಪ, ಟಿ.ಬಿ.ಜಗದೀಶ್, ಬಾಳೆಕಾಯಿ ಮೋಹನ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್.ಎಂ.ಮಹಾರುದ್ರ, ಜಿ.ವಿಜಯ ಕುಮಾರ್, ಶಾಂತ ಆನಂದ, ಮಹೇಶ್ ಮೂರ್ತಿ, ಅನಿತಾ ರವಿಶಂಕರ್, ಪಿ.ರುದ್ರೇಶ್, ವೈ.ಹೆಚ್.ನಾಗರಾಜ್, ಕಿರಣ್ ದೇಸಾಯಿ, ಕಾಯಕಯೋಗಿ ಚೆನ್ನಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Rajabheedi utsav