Suddilive || Shivamogga
ಬಸವಣ್ಣನ ಪುತ್ಥಳಿಗೆ ಪೂಜಿಸಿ ಬಸವ ಜಯಂತಿ ಆಚರಣೆ-Basava Jayanti celebrated by worshipping the statue of Basavanna
ಮಹಾನ್ ಮಾನವತಾವಾದಿ, ಶ್ರೇಷ್ಠ ಸಮಾಜ ಸುಧಾರಕ, ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಬಸವ ಕೇಂದ್ರದ ಸ್ವಾಮೀಜಿ, ಜನಪದ ಕಲಾತಂಡದೊಂದಿಗೆ ಇಂದು ಬಸವ ಕೇಂದ್ರದಲ್ಲಿ ಬಸಣ್ಣನವರ ಮತ್ತು ವಚನ ಸಾಹಿತ್ಯದ ಪಲ್ಲಕಿ ಉತ್ಸವ ನಡೆದಿದೆ. ಜಯಾರಾಮ್ ಮನೆಯಿಂದ ಅಂಬ್ಲಿ ಮತ್ತು ಕಾಂತೇಶ್ ಕದರಮಂಡಲಗಿಯಿಂದ ಮಜ್ಜಿಗೆಯನ್ನ ತರಿಸಲಾಯಿತು. 50 ಜನರ ರಕ್ತ ದಾನ ಶಿಬಿರ ನಡೆದಿದೆ. ಬಸವಕೇಂದ್ರದಲ್ಲಿ ಇದು 25 ನೇ ರಕ್ತದಾನ ಶಿಬಿರವಾಗಿದೆ. ನಗರದ ಹಲವು ವೃತ್ತದಲ್ಲಿ ಮಜ್ಜಿಗೆ ಅಂಬ್ಲಿ ಹಂಚಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ ಸಿ ಯೋಗೀಶ್, ರುದ್ರಮುನಿ, ಬಳ್ಳಕೆರೆ ಸಂತೋಷ್, ಪತ್ರಕರ್ತ ಸೋಮನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ನೇತೃತ್ವದಲ್ಲಿ ಬಸವ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಹೆಚ್ .ಪಿ.ಗಿರೀಶ್ ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್, ಬಸವರಾಜ್, ಯುವ ಕಾಂಗ್ರೆಸ್ನ ಪ್ರಮುಖರಾದ ಕೆ ಎಲ್ ಪವನ್, ಗುರುಪ್ರಸಾದ್, ಎಸ್ ಜೆ ಮಿಥುನ್, ಎಸ್ . ಎಸ್ ಶರತ್ , ರಾಹುಲ್, ಹಾಗೂ ಇತರರು ಇದ್ದರು.
Basava Jayanti