Suddilive || Shivamogga
ಬಿಎಸ್ ವೈ ಭೀಷ್ಮರಾಗಿ ಉಳಿದಿಲ್ಲ ದೃತರಾಷ್ಟ್ರರಾಗಿದ್ದಾರೆ- ಆಯನೂರು ಕಿಡಿ-BSY is no longer Bhishma, but Dritharastra - Ayanuru Kidi
ಬಿಜೆಪಿ ಜನಾಕ್ರೋಶದ ಯಾತ್ರೆ ಬಿಎಸ್ ವೈ ಕುಟುಂಬದ ಯಾತ್ರೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟ ನಡೆಸುವವರು ಪ್ರಾಮಾಣಿಕರಾಗಿರಬೇಕು. ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲಾಗುತ್ತಿದೆ. ಹಾಲಿನ ದರ ಏರಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿ ಜನಾಕ್ರೋಶ ನಡೆಸುತ್ತಿದೆ. ಪ್ರಾಮಾಣಿಕರ ಹೋರಾಟವನ್ನ ಸ್ವಾಗತಿಸಬಹುದು. ಆದರೆ ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರಕ್ಕಿಂತ, ಈಗಿನ ಕೇಂದ್ರ ಸರ್ಕಾರ ಎಲ್ಲಾ ಭಾಗಳಲ್ಲಿಯೂ ಖರೀದಿ ವಸ್ತುಗಳನ್ನ ದುಪ್ಪಟ್ಟು ಮಾಡಿದೆ ಆರೋಪಿಸಿದರು.
ಹಾಲಿನ ದರ ಏರಿಕೆ ಖಂಡಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಟೋಲ್ ಶುಲ್ಕ ಏರಿಕೆ, ಪೆಟ್ರೋಲ್ ದರ ಏರಿಕೆಯ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ ಸಮಾವೇಶದಲ್ಲಿ ಮಾತನಾಡುತ್ತಿಲ್ಲ ಯಾಕೆ. ಶಾಸಕರ ವೇತನ ಹೆಚ್ಚಳವನ್ನ ಬಿಜೆಪಿ ಶಾಸಕ ಬೆಲ್ಲದ್ ಮೂಲಕ ಪ್ರಸ್ತಾಪಿಸಿ ಎಲ್ಲ ಪಕ್ಷಗಳು ವಿರೋಧಿಸಲೇ ಇಲ್ಲ. ಶಾಸಕರಿಗೆ ಹತ್ತಿರ ಹತ್ತಿರ 1 ಲಕ್ಷ ರೂ. ಸಂಬಳ ಹೆಚ್ಚಳವಾಯಿತು. ಇದರ ಹೊರೆಯಾರಿಗೆ ಬೀಳುತ್ತೆ? ಈ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲವೇಕೆ ಎಂದು ಗುಡುಗಿದರು.
2022 ರಲ್ಲಿ ಶಾಸಕರ ಸಂಬಳ ಹೆಚ್ಚಳವಾಯಿತು. ಐದು ವರ್ಷಕ್ಕೆ ಹೆಚ್ಚಿಸುವಂತಿಲ್ಲ ಎಂಬ ನಿರ್ಣಯ ಕೈಗೊಳ್ಳಲಾಯಿತು. ಕನ್ಸೂಮರ್ ಪ್ರೈಸ್ ಇಂಡೆಕ್ಸ್ ಮೇಲೆ ಶಾಸಕರ ಸಂಬಳ ಹೆಚ್ಚಾಗಬೇಕಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಮಾತ್ರ ಸಂಬಳ ಹೆಚ್ಚಾಗಬೇಕು. ಮೂರೇ ವರ್ಷದಲ್ಲಿ ಇದರ ದರ ಹೆಚ್ಚಳವಾಗಿದೆಯಾ? ಈ ಹೆಚ್ಚಳವನಗನ ಸದನದ ನಿರ್ಣಯವನ್ನಮುರಿದು ಹೆಚ್ಚಿಸಿದ್ದರ ಹುನ್ನಾರವೇನು ಎಂದು ಪ್ರಶ್ನಿಸಿದರು.
ಭ್ರಷ್ಠಾಚಾರದ ಬಗ್ಗೆ ಮಾತನಾಡುವ ಬಿಜೆಪಿ 2012 ರಲ್ಲಿ ವಿಧಾನ ಸಭೆಯಲ್ಲಿ ಗಾಂಧಿ ಪ್ರತಿಮೆ ಸ್ಥಾಪನೆಯಾಗಿದೆ. 11 ಕೋಟಿ 95 ಲಕ್ಷದ ಪ್ರತಿಮೆಯಾಗಿತ್ತು ಇದು 22½ ಟನ್ ಪ್ರತಿಮೆಯಾಗಿದೆ. 2024 ರಲ್ಲಿ ನಮ್ಮ ಸರ್ಕಾರ ಬೆಳಗಾವಿಯಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಲಸಯಿತು. 20 ಟನ್ ಪ್ರತಿಮೆಯನ್ನ 4,83 ಕೋಟಿಗೆ ಮುಕ್ತಾಯವಾಯಿತು. 2012 ರಲ್ಲಿ ಸ್ಥಾಪಿತಗೊಂಡ ಗಾಂಧಿಯ ಪ್ರತಿಮೆ ಕರ್ಚು 2024 ರಲ್ಲಿ ಹೆಚ್ಚಾಗಬೇಕಿತ್ತು. 12 ವರ್ಷಗಳಲ್ಲಿ ನಿರ್ಮಾಣದ ಉತ್ಪಾದನ ವೆಚ್ಚವೂ ಹೆಚ್ಚಾಗಬೇಕಿತ್ತು. ಎರೆಉ ವರೆ ಟನ್ ಮಾತ್ರ ಕಡಿಮೆಯಾದರೂ ಹಣ ದುಬಾರಿಯಾಗಿಲ್ಲ. ಇಂತಹವರು ಕಾಂಗ್ರೆಸ್ ಪಕ್ಷದ ಭ್ರಷ್ಠಾಚಾರದ ಬಗ್ಗದ ಮಾತನಾಡುತ್ತಿದ್ದಾರೆ ಎಂದು ಅಸನಾಧಾನ ಹೊರ ಹಾಕಿದರು.
ಬಿಜೆಪಿಯ ಜನಾಕ್ರೋಶ ಸಮಾವೇಶದಲ್ಲಿ ಕಣ್ಣೀರು ಹಾಕಿ ಬಿಎಸ್ ವೈ ಜೈಲಿಗೆ ಹೋದರು ಆ ಬಗ್ಗೆ ಇಂದಿನ ಬಿಜೆಪಿ ಸಮಾವೇಶದಲ್ಲಿ ನಾಯಕರು ಮಾತನಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಾಯಕರ ಬೆಲೆ ಇಳಿದಿದೆ. ಹಾಗಾಗಿ ಬೆಲೆ ಏರಿಕೆಯ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿಯ ನಾಯಕ ಯಡಿಯೂರಪ್ಪನವರಿಗೆ ಆದ ಅನ್ಯಾಯವಾಗಿರುವಬಗ್ಗೆ ತಿಳಿಯಬೇಕಿದೆ. ಬಿಎಸ್ ಮತ್ತು ಪುತ್ರರು ಜನರ ಮಧ್ಯೆ ಸತ್ಯ ಹೇಳಿ. ವಿಜೇಂದ್ರರ ಕುರ್ಚಿ ಉಳಿಸಲು ಅಶ್ವಮೇಧ ಯಾಗ ಮಾಡಲು ಹೊರಟಿದ್ದಾರೆ. ಬಿಎಸ್ ವೈ ಭೀಷ್ಮರಾಗಿ ಉಳಿದಿಲ್ಲ. ದೃತರಾಷ್ಟ್ರರಾಗಿದ್ದಾರೆ ಎಂದು ದೂರಿದ್ದಾರೆ.
BSY is no longer Bhishma