Suddilive || Shivamogga
ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ರಘುನಾಥ್ ಪರ ರಘುರಾಮ್ ಮತಯಾಚನೆ-Raghuram seeks votes for Raghunath in Brahmin Mahasabha elections
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆ ನಾಳೆ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ಮತದಾನ ನಡೆಯಲಿದ್ದು ಇಂದು ಸಹ ಮತಯಾಚನೆ ನಡೆದಿದೆ.
ರಘುರಾಮ್ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ. ರಘುರಾಮ್ ಮಾತನಾಡಿ, ಸದಸ್ಯತ್ವ ಅಭಿಯಾನದ ಬಗ್ಗೆ ಅಸಮಾಧಾನವಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿಯಾನ ನಡೆಸಲಿದ್ದೇವೆ ಎಂಬ ಭರವಸೆ ನೀಡಿದರು. ಕೆಪಿಟಿಸಿಎಲ್ ಕೆಇಬಿಯಲ್ಲಿ, ಮತ್ತು ಇತರೆ ಬ್ರಾಹ್ಮಣ ಸಮುದಾಯದ ಜೊತೆ ಸೇವೆ ಸಲ್ಪಿದ್ದೇನೆ ಎಂದರು
ಆಸ್ಪತ್ರೆ ಮತ್ತು ಶಾಲೆಯನ್ನ ಆರಂಭಿಸುವ ಗುರಿಯನ್ನಹೊಂದಿದ್ದೇವೆ. ಅಧ್ಯಕ್ಷರಿಗೆ ಒಂದೇ ಅವಧಿಗೆ ನಿಗದಿಪಡಿಸುವುದು. ಮಹಾಸಭೆ ಅಭಿವೃದ್ಧಿಯ ದೃಷ್ಠಿಯಿಂದ ಬೈಲಾಗೆ ಸಕಾರತ್ಮಕ ತಿದ್ದುಪಡಿ ತರುವುದು. ಉಪಸಮಿತಿಗಳನ್ನ ರಚಿಸುವುದು.
ಸದಸ್ಯರ ದತ್ತಾಂಶ ಗಣಕೀಕರಣ ಮಾಡುವುದು. ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಗೆ ಅಭಿವೃದ್ಧಿ ಕಾರ್ಯಗಳಿಗೆ ಸಿಎ ನಿವೇಶನ ಕೊಡಿಸುವ ಪ್ರಯತ್ನ, ಬೃಹತ್ ಉದ್ಯೋಗ ಮೇಳ, ಸಾಮೂಹಿಕ ಉಪನಯನ, ಹೂಡಿಕೆ/ ಕಾರ್ಪಸ್ ಹಣ ಸಂಗ್ರಹಿಸಿ ವಿದ್ಯಾರ್ಥಿ ವೇತನ ನೀಡಲಾಗುವುದು.
ವೃದ್ಯಾಪ್ಯ ವೇತನ, ವಿಧವಾ ವೇತನಾ, ಅಂಗವಿಕಲ ವೇತನವನ್ನ ನೀಡುವುದು. ಮೊದಲಾದ ವಾರ್ಷಿಕ ಕಾರಗಯಕ್ರಮಗಳು ಮತ್ತು ಪ್ರಮುಖ ಯೋಜನೆಗಳನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ಅಶೋಕ ಹಾರನಹಳ್ಳಿಯವರು ಇತ್ತೀಚೆಗೆ ವಿಡಿಯೋವೊಂದನ್ನ ಹರಿದುಬಿಟ್ಟು ರಘುನಾಥ್ ಸೋತನಂತರ ಮಹಸಭಾದಕಡೆ ಬಂದೇ ಇಲ್ಲ ಎಂಬ ಆರೋಪ ಮಾಡಿದ್ದಾರೆ. ಆದರೆ ಮಹಸಭದ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದರು.
550 ಮನೆ 2000 ಕ್ಕೂ ಹೆಚ್ಚು ಜನರನ್ನ ಸಂಪರ್ಕಿಸಿದ್ದೇವೆ. ಜಿಲ್ಲೆಯ ಸಮುದಾಯ ಕೈಜೋಡಿಸಿರುವೆ. ನಾಳೆಯ ಚುನಾವಣೆಯಲ್ಲಿ ರಘುನಾಥ್ ರನ್ನ ಮತ್ತು ನನ್ನನ್ನ ಗೆಲ್ಲಿಸಬಹುದು ಎಂದರು.
Raghuram seeks votes