Suddilive || Shivamogga
Passenger dies after being hit by moving train
ರೈಲು ಹತ್ತಲಿಕ್ಕೆ ಹೋದ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ನಿನ್ನೆ ರಾತ್ರಿ ತಾಳಗುಪ್ಪದಿಂದ ಬಿಡುವ ಬೆಂಗಳೂರು ಮೂಲಕ ಮೈಸೂರುಗೆ ತಲುಪುವ ರೈಲು ಶಿವಮೊಗ್ಗಕ್ಕೆ 11 ಗಂಟೆಗೆ ತಲುಪಿತ್ತು. ಶಿವಮೊಗ್ಗದಲ್ಲಿ ಪ್ಯಾಸೆಂಜರ್ ಗಳನ್ನ ಹತ್ತಿಸಿಕೊಂಡು ತೆರಳಿದ ರೈಲನ್ನ ಹತ್ತಲು ಕೃಷ್ಣಪ್ಪ ಮುಂದಾಗಿದ್ದಾರೆ.
ರೈಲ್ವೆ ಫ್ಲಾಟ್ ಫಾರಂ 1 ರಲ್ಲಿ ರೈಲು ನಿಧಾನವಾಗಿ ಚಲಿಸಿದ ಕಾರಣ ಕೃಷ್ಣಪ್ಪ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕೃಷ್ಣಪ್ಪ ಕಾಶೀಪುರದ ನಿವಾಸಿಯಾಗಿದ್ದಾರೆ. ಇವರಿಗೆ 53 ವರ್ಷ ವಯಸ್ಸಾಗಿತ್ತು.
ಪ್ರಕರಣ ಶಿವಮೊಗ್ಗದ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Passenger dies