ಸೀಮೆಗಿಲ್ಲದ ನಾಯಿನಾ ಎಂದು ಮಾಲೀಕನ ಮೇಲೆ ಹಲ್ಲೆ-Dog Owner attacked

 Suddilive || Thirthahalli

ಸೀಮೆಗಿಲ್ಲದ ನಾಯಿನಾ ಎಂದು ಮಾಲೀಕನ ಮೇಲೆ ಹಲ್ಲೆ-Dog Owner attacked by an acquaintance

Dog, owner

ನಾಯಿ ವಿಚಾರದಲ್ಲಿ ಪರಿಚಯಸ್ಥರಲ್ಲೇ ಗಲಾಟೆಯಾಗಿದೆ. ಸೀಮೆಗಿಲ್ಲದ ನಾಯಿ ಸಾಕಿದೆಯಾ ಎಂದು ಆರೋಪಿಸಿ ನಾಯಿ ಮಾಲೀಕನ ಮೇಲೆ ಹಲ್ಲೆ ನಡೆದಿದೆ. 

ಬಿಳಲುಕೊಪ್ಪದ ರಕ್ಷಿತ್ ಎಂಬುವರು ತಾವು ಸಾಕಿದ ನಾಯಿಗಳಿಗೆ ತೀರ್ಥಹಳ್ಳಿಗೆ ಬಂದು ವ್ಯಾಕ್ಸಿನ್ ಹಾಕಿಸಿಕೊಂಡು ರಾತ್ರಿ ಊರಿಗೆ ವಾಪಾಸ್ ಆಗುವಾಗ ಬಿಳಲುಕೊಪ್ಪದ ಹೋಟೆಲ್ ವೊಂದಕ್ಕೆ ಊಟಕ್ಕೆ ಹೋಗಿದ್ದಾರೆ.

ಅಲ್ಲಿಗೆ ಬಂದ ರಕ್ಷಿತ್ ಪರಿಚಯಸ್ಥರು ನಾಯಿ ಏನು ಬಹಳ ಜೋರಾಗಿವೆಯಾ? ಎಂದು ನಾಯಿಗಳನ್ನ ಮುಟ್ಟಲು ಮುಂದಾಗಿದ್ದಾರೆ. ಪರಿಚಯಸ್ಥರಲ್ಲದವರನ್ನ ನಾಯಿಗಳು ಅಟ್ಯಾಕ್ ಮಾಡ್ತವೆ ಎಂದು ಹೇಳಿ ರಕ್ಷಿತ್ ಅಲ್ಲಿಂದ ಹೊರಟಿದ್ದಾರೆ.

ಅಷ್ಟಕ್ಕೆ  ನಿನ್ನ ನಾಯಿಗಳು ಸೀಮೆಗಿಲ್ಲದ ನಾಯಿಗಳಾ ಎಂದು ಪರಿಚಯಸ್ಥರು ಮಾಲೀಕನ ಮೇಲೆ ತಿರುಗಿಬಿದ್ದಾರೆ. ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ರಕ್ಷಿತ್ ರನ್ನ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಂತ್, ಧನುಶ್, ಕಾರ್ತಿಕ್ ಹಾಗೂ ಇತರೆ ಇಬ್ಬರ ಮೇಲೆ ಎಫ್ಐಆರ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Dog Owner attacked

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close