Suddilive || Holehonnuru || Shivamogga
ಐಯಾಮ್ ಯುವರ್ ಎನಿಮಿ, ಖಡ್ಗ ಹಿಡಿದು ಕಿಂಗ್ ಎಂದು ಬರೆದುಕೊಂಡವರ ವಿರುದ್ಧ ಬಿತ್ತು ಕೇಸು! File a case against those who wrote "I am your enemy, King" while holding a sword!
ಖಡ್ಗ, ಲಾಂಗು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಸು ಕೊಡುವ ಗಿರಾಕಿಗಳ ವಿರುದ್ಧ ಎರಡು ಠಾಣೆಗಳಲ್ಲಿ ಪ್ರತ್ಯೇಕ ಸುಮೋಟೋ ಪ್ರಕರಣ ದಾಖಲಾಗಿದೆ.
ಶಿವಾಜಿ ಮಹಾರಾಜನ ರೀತಿ ಖಡ್ಗ ಹಿಡಿದು ಇನ್ ಸ್ಟಾ ಗ್ರಾಮ್ ನಲ್ಲಿ ಹರಿಬಿಟ್ಟ ಪ್ರಕರದಲ್ಲಿ ಓರ್ವನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಎಮ್ಮೆಹಟ್ಟಿಯ ದರ್ಶನ್ ಶಿಂಧೆ ಎಂಬಾತ ಯುವಕ ಶಿವಾಜಿ ಮಹಾರಾಜನ ಭಾವಚಿತ್ರದಂತೆ ಖಡ್ಗ ಹಿಡಿದು ಇನ್ ಸ್ಟಾ ಗ್ರಾಮ್ ನಲ್ಲಿ ವಿಡಿಯೋವೊಂದನ್ನ ಹರಿಬಿಟ್ಟಿದ್ದ, ಪ್ರಕರಣಕ್ಕೆ ಸಂಬಂಧಿಸಿಂದಂತೆ ಆತನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೊಟೊದಲ್ಲಿ ಕಿಂಗ್ ಎಂದು ಬರೆದುಕೊಂಡಿರುವುದು ದೂರಿನಲ್ಲಿ ದಾಖಲಾಗಿದೆ. ಇದು ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗಿದೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
I am your enemy
ಮತ್ತೊಂದು ಪ್ರಕರಣದಲ್ಲಿ ಲಾಂಗ್ ಹಿಡಿದು See Who r u? I am your enemy ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟ ವಿಡಿಯೋ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಇನ್ ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೋರ್ವ Mr_zee96 ಎಂಬ ಐಡಿಯಲ್ಲಿ ವಿಡಿಯೋ ಹರಿಬಿಟ್ಟದ್ದರು. ಇದನ್ನ ಪರಿಶೀಲಿಸಿದಾಗ ವಿಡಿಯೋ ಹರಿಬಿಟ್ಟವನನ್ನ ಮಂಜುನಾಥ ಬಡಾವಣೆಯ ಜಬೀರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
File a case against holding a sword