Suddilive || Shivamogga
Why did you keep two ministers in the party who speak as they please - Eshwarappa questions
ಜಮ್ಮು ಕಾಶ್ಮೀರದ ಸಿಎಂ ಓವರ್ ಅಬ್ದುಲ್ಲಾರನ್ನ ಮಾರ್ಗದರ್ಶಕ ರಾಗಿ ಕಾಂಗ್ರೆಸ್ ಕರೆಸಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.
ಸಚಿವರಾದ ಸಂತೋಷ್ ಲಾಡ್, ತಿಮ್ಮಾಪುರ ಅವರ ಹೇಳಿಕೆ ಕಾಂಗ್ರೆಸನ ಅಭಿಪ್ರಾಯವಲ್ಲ ಎಂದು ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಆದರೆ ಬಾಯಿ ಬಂದಂಗೆ ಈ ನಾಯಕರು ಮಾತನಾಡುತ್ತಿದ್ದಾರೆ. ಇವರನ್ನಯಾಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಮಕ್ಕಳನ್ನ, ವಿಧವಾ ಪತ್ನಿಯನ್ನ ನೋಡಿದಾಗ ನೋವಾಗಿದೆ ಎಂದು ಒಮರ್ ಹೇಳಿದ್ದಾರೆ. ಮುಸ್ಲೀಂ ಓಲೈಕೆಯ ಕಾಂಗ್ರೆಸ್ ನಾಯಕರಿಗೆ ಏನು ರೋಗ ಬಂದಿದೆ ಎಂಬುದನ್ನ ಪ್ರಶ್ನಿಸಿದರು. ಜೈರಾಮ್ ರಮೇಶ್ ಬಾಯಿ ಮುಚ್ಚಿಕೊಂಡು ಇರಿ ಎಂದರೂ ಈ ನಾಯಕರು ಬಾಯಗೆ ಬಂದಂತೆ ಹೇಳುತ್ತಿರುವುದೇಕೆ ಎಂದು ಕೇಳಿದರು.
ದೇಶದಲ್ಲಿ ನೋವಾಗಿದೆ. 140 ಕೋಟಿ ಜನ ಒಟ್ಟಿಗಿದ್ದಾರೆ. ಇಡೀ ದೇಶ ಒಂದಾಗಿರುವಾಗ ದೇಶ ವಿರೋಧಿ ಹೇಳಿಕೆ ಯಾಕೆ? ಪಾಕ್ ಸೈನಿಕ ಮುಖ್ಯಸ್ಥ ಅಜೀಮ್ ಮುನೀರ್ ನಾಪತ್ತೆಯಾಗಿದ್ದಾನೆ. ಇದು ದೇಶದ ಒಗ್ಗಟ್ಟನಿಂದ ಓಡಿಹೋಗಿರುವುದಾಗಿ ಹೇಳಿದರು.
ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾದ ಅವರು ಮುಖ್ಯಮಂತ್ರಿಗಳೋ ಅಥವಾ ಗೂಂಡಾನೋ ಎಂದು ಕೇಳಿದ ಈಶ್ವರಪ್ಪ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಅಟ್ಯಾಕ್ ಆಗಿದ್ದನ್ನ ಸೆಕ್ಯೂರಿಟಿ ಲ್ಯಾಪ್ಸಸ್ ಎನ್ನುವ ನೀವು ನಿಮ್ಮಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ವಾಗಿರೋದು ಇಂಟಲಿಜೆನ್ಸಿ ಫೇಲ್ಯೂರ್ ಅಲ್ವಾ ಎಂದು ಪ್ರಶ್ನಿಸಿದರು.
ಪಾಕ್ ನಲ್ಲಿ 250 ಸೈನಿಕರು 5000 ಅಧಿಕಾರಿಗಳು ಓಡಿಹೋಗಿದ್ದಾರೆ. ಸಿದ್ದರಾಮಯ್ಯ ಪಾಕ್ ಮಾಧ್ಯಮಗಳಲ್ಲಿ ರಾರಾಜಿಸುತ್ತಿದ್ದೀರಿ ಎಂದರೆ ನೀವು ಹೀರೋಗಳೋ ಜೀರೋನಾ ಎಂದು ಪ್ರಶ್ನಿಸಿದರು.
Eshwarappa questions