MrJazsohanisharma

ಜಾತ್ರೆಯ ವಿಳೆವು ಸಭೆಯಲ್ಲಿ ಮಾರಾಮಾರಿ-8 ಜನರ ವಿರುದ್ಧ ಎಫ್ಐಆರ್!Vilevu meeting

 Suddilive || Bhadravathi

ಜಾತ್ರೆಯ ವಿಳೆವು ಸಭೆಯಲ್ಲಿ ಮಾರಾಮಾರಿ-8 ಜನರ ವಿರುದ್ಧ ಎಫ್ಐಆರ್!Fight at fair's Vilevu meeting - FIR against 8 people!

Vilevu, Meeting

ತಾಲೂಕಿನ ಅತ್ತಿಗುಂದದ ಗ್ರಾಮ ದೇವತೆ ಜಾತ್ರೆಯ ನಂತರ ಲೆಕ್ಕಾಚಾರದ ವಿಳೆವು ಸಭೆಯಲ್ಲಿ ಮಾರಾಮಾರಿ ನಡೆದಿದೆ. ಮಾರಾಮಾರಿಯಲ್ಲಿ ಐವರಿಗೆ ಗಾಯವಾಗಿದೆ. 8 ಜನರ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

1. ರಾಜು ತಂದೆ ರುದ್ರಪ್ಪ, 2.ರವೀಶ ತಂದೆ ಕರಿಯಪ್ಪ, 3.ಮಧು ತಂದೆ ಮಲೆಶಪ್ಪ, 4.ಮಲೆಶಪ್ಪ ತಂದೆ ತಿಮ್ಮಪ್ಪ, 5.ಕುಮಾರ ತಂದೆ ರಮೇಶ, 6.ಹರೀಶ ತಂದೆ ಶೇಖರಪ್ಪ, 7.ರಾಜಪ್ಪ ತಂದೆ ರಾಮಪ್ಪ ಮತ್ತು 8. ವರುಣ ತಂದೆ ವೆಂಕಟೇಶ ಇವರುಗಳ ವಿರುದ್ಧ ದೂರು ದಾಖಲಾಗಿದೆ. 

ಅತ್ತಿಗುಂದ ಗ್ರಾಮದ ಗ್ರಾಮ ದೇವತೆಯಾದ ಅಂತರಘಟ್ಟಮ್ಮ ದೇವಸ್ಥಾನದ ಜಾತ್ರೆಯು ಏ.07 ರಿಂದ 12 ರವರೆಗೆ ಆದ್ರೂರಿಯಾಗಿ ಜಾತ್ರೆ ನಡೆದಿದೆ, ಈ ಜಾತ್ರೆಯಲಿ.. 5 ಜನ ಮುಖಂಡರನ್ನು ನೇಮಕ ಮಾಡಲಾಗಿದ್ದು, ಎಲ್ಲರೂ ಸೇರಿ ತೀರ್ಮಾನ ಮಾಡಿದಂತೆ 240 ಮನೆಗಳಿಂದ ಹಣವನ್ನು ಸಂಗ್ರಹಿಸಿ ಜಾತ್ರೆಯನ್ನು ನಡೆಸಲಾಗಿದೆ.‌ 5 ಜನ ಮುಖಂಡರು  ಸಂಗ್ರಹಿಸಿದ ಹಣದಲಿ ಜಾತ್ರೆಗೆ ಖರ್ಚು ವೆಚ್ಚವನ್ನು ಮಾಡಿದ್ದಾರೆ. 

ಏ.23 ರಂದು ಬೆಳಿಗ್ಗೆ ಸುಮಾರು 11:00 ಗಂಟೆ ಸಮಯದಲಿ. ಊರಿನ ಮುಖಂಡರು ಹಾಗೂ ಸಮಾಜದ ಜನರು ಎಲ್ಲರೂ ಜಾತ್ರೆಗೆ ಆದ ಖರ್ಚು ವೆಚ್ಚದ ವಿಚಾರವಾಗಿ ಅಂತರಘಟ್ಟಮ್ಮ ದೇವಸ್ಥಾನದ ಒಳಗೆ ಸಭೆಯನ್ನು ಸೇರಿದ್ದು ಸಭೆಯಲಿ. ಈ ಹಿಂದೆ ನೇಮಕವಾದ 5 ಜನ ಮಖಂಡರು ಜಾತ್ರೆಗೆ ಆದ ಖರ್ಚು ವೆಚ್ಚದ ಲೆಕ್ಕವನ್ನು ಒಪ್ಪಿಸಿ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಸಭೆಯ ಮುಂದೆ ವಿಳೆವು ಇಡಬೇಕಿತ್ತು, 

ಆದರೆ ಈ ಸಭೆಯಲಿ ಐವರು ಮುಖಂಡರು ವಿಳೆವು ಇಡದ ಕಾರಣ  ಸಂತೋಷ ತಂದೆ ಭೈರಪ್ಪ, ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿಯಂತೆ ಸಭೆಯಲಿ ವಿಳೆವು ಇಡಬೇಕೆಂದು ಮುಖಂಡರನ್ನು ಕೇಳಿದ್ದಾರೆ, ಮುಖಂಡರಾದ ಧರ್ಮಕುಮಾರ ಇವರು ಈ ಹಿಂದೆಯೂ ಸಹಾ ಯಾರೂ ಏಳೆವು ಇಟ್ಟಿರುವುದಿಲ್ಲ., ನಾವು ಸಹ ಇಡುವುದಿಲ್ಲ ಎಂದು ಹೇಳಿದ್ದಾರೆ. ಬಗ್ಗೆ, ಸರಿಯಾದ ಕಾರಣ ಕೊಡಿ ಎಂದು ಸಂತೋಷ ಸಹೋದರರು ಸಭೆಯಲಿ ಕೇಳಿದ್ದಾರೆ.

ಆಗ ಗ್ರಾಮದ ವಾಸಿಗಳಾದ 1. ರಾಜು ತಂದೆ ರುದ್ರಪ್ಪ, 2.ರವೀಶ ತಂದೆ ಕರಿಯಪ್ಪ, 3.ಮಧು ತಂದೆ ಮಲೆಶಪ್ಪ, 4.ಮಲೆಶಪ್ಪ ತಂದೆ ತಿಮ್ಮಪ್ಪ, 5.ಕುಮಾರ ತಂದೆ ರಮೇಶ, 6.ಹರೀಶ ತಂದೆ ಶೇಖರಪ್ಪ, 7.ರಾಜಪ್ಪ ತಂದೆ ರಾಮಪ್ಪ ಮತ್ತು 8. ವರುಣ ತಂದೆ ವೆಂಕಟೇಶ ಇವರುಗಳು ಏಕಾಏಕಿ ಸಭೆಯ ಒಳಗೆ ನುಗ್ಗಿ ಸಂತೋಷ ಸಹೋದರರನ್ನ ಆಯುಧಗಳಿಂದ ಥಳಿಸಿರುವುದಾಗಿ ಹೇಳಲಾಗಿದೆ.   ಹೊಡೆಯಲು ಬಳಸಿದ ಚಾಕು, ಚೈನು, ರಾಡು ಮತ್ತು ದೊಣ್ಣೆಗಳನ್ನು ತೋರಿಸಿ ಇನ್ನೊಮ್ಮೆ ವಿಳೆವು ವಿಚಾರಕ್ಕೆ ಬಂದರೆ ಹೊಡೆದು ಸಾಯಿಸುವುದಾಗಿ ಬೆದರಿಸಿದ್ದಾರೆ, 

ಆಯುಧಗಳನ್ನ ಅಲೆಯೇ ರಸ್ತೆಯಲ್ಲಿ ಬಿಸಾಕಿ ಹೋಗಿರುತ್ತಾರೆ. ರಕ್ತಗಾಯವಾದ ಕಾರಣ ಎರಡು ಕಾರಿಗಳಲಿ ಸಹೋದರರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿದೆ.‌ ಸಾಯಿಸುವ ಉದ್ದೇಶದಿಂದ ಚಾಕು, ಚೈನು, ದೊಣ್ಣೆ, ರಾಡಿನಿಂದ ಹೊಡೆದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. 

Vilevu meeting

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close