ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ-government job

 Suddilive || Shivamogga

 ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ -Fraudulently offering a government job

Government, job

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ.  ವಂಚಿಸಿದ ಘಟನೆ ಶಿವಮೊಗ್ಗದ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋಪಿಶೆಟ್ಟಿಕೊಪ್ಪದ 43 ವರ್ಷದ ನಿವಾಸಿಯೊಬ್ಬರು ತಮಗೆ ಪರಿಚಯವಾದ ಅಶ್ವಿನಿ ಗೌಡ, ಪತಿ ಜಗದೀಶ್ ಯಾನೆ ಮಂಜಪ್ಪಗೌಡ ಪರಿಚಯವಾಗಿದ್ದು ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ 4 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. 

4 ಲಕ್ಷ ರೂ ಹಣದಲ್ಲಿ ಫೊನ್ ಪೇ ಮತ್ತು ನಗದು ರೂಪದಲ್ಲಿ ಒಟ್ಟು 3,96,061 ರೂ ಹಣವನ್ನ ಅಶ್ವಿನಿಗೌಡ, ಜಗದೀಶ್ ಮತ್ತು ಮಗ ಕಾರ್ತಿಕ್ ಗೌಡರಿಗೆ ನೀಡಿದ್ದರು. ಇದರಿಂದ ಕಳೆದ ಮೂರು ವರ್ಷದಿಂದ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ದಿನ ಮುಂದೂಡುತ್ತಿದ್ದರು. 

ಇದರಿಂದ ಬೇಸತ್ತ 43 ವರ್ಷದ ವ್ಯಕ್ತಿ ಹಣ ವಾಪಾಸ್ ಕೊಡುವಂತೆ ಕೇಳಿದ್ದಾರೆ. ಮೂರು ವರ್ಷದಲ್ಲಿ 1,70,600 ರೂ. ನೀಡಿರುವ ಆರೋಪಿಗಳು ಉಳಿದ ಹಣ ನೀಡದೆ ವ್ಯಂಗ್ಯವಾದ ಮಾತುಗಳನ್ನ ಆಡಿರುವುದಾಗಿ ದೂರಲಾಗಿದೆ.

ಇದರಿಂದ ಬೇಸತ್ತ ವ್ಯಕ್ತಿ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಗೌಡ, ಪತಿ ಜಗದೀಶ್ ಯಾನೆ ಮಂಜಪ್ಪ ಗೌಡ ಹಾಗೂ ಮಗ ಕಾರ್ತಿಕ್ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಿದ್ದಾರೆ. 

government job

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close