ಜನಿವಾರ ತೆಗೆಯಿಸಿದ ಘಟನೆ ಖಂಡಿಸಿ ವಿಪ್ರರಿಂದ ಮೌನ ಪ್ರತಿಭಟನೆ- Silent protest by Vipra

 Suddilive || Shivamogga

ಜನಿವಾರ ತೆಗೆಯಿಸಿದ ಘಟನೆ ಖಂಡಿಸಿ ವಿಪ್ರರಿಂದ ಮೌನ ಪ್ರತಿಭಟನೆ -Silent protest by Vipra condemning the incident of Janiwara removal

Vipra-silent

ಶಿವಮೊಗ್ಗ, ಬೀದರ್ ಹಾಗೂ ಇನ್ನಿತರೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಜನಿವಾರ ತೆಗೆಯಿಸಿದ ಘಟನೆಯನ್ನ‌ ಖಂಡಿಸಿ ಇಂದು ವಿಶ್ವ ಮಧ್ವ ಮಹಾಪರಿಷತ್ ಹಾಗೂ ಜಿಲ್ಲಾ ಸರ್ವ ವಿಪ್ರ ವೃಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. 

ಸಿಇಟಿ ಪರೀಕ್ಷೆಯಲ್ಲಿ ಹಲವೆಡೆ ವಿಪ್ರ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಿಸುವ ಘಟನೆಯ ಜೊತೆಗೆ ಇತ್ತೀಚೆಗೆ, ಕೆಲ ಸಿನಿಮಾ, ನಾಟಕ, ಭಾಷಣಗಳಲ್ಲಿ ಅನಗತ್ಯವಾಗಿ ಬ್ರಾಹ್ಮಣ ಸಮುದಾಯವನ್ನ ಹಿಯಾಳಿಸುವುದು ನಡೆಯುತ್ತಿದೆ. ಇವುಗಳನ್ನೆಲ್ಲ ಸ್ಥಗಿತಗೊಳಿಸುವಂತೆಯೂ ಸಹ ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ. 

ಪ್ರತಿಭಟನಾ ಮೆರವಣಿಗೆಯು ಶಿವಮೊಗ್ಗ ನಗರದ ತಿಲಕ ನಗರದ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೌನ ಪ್ರತಿಭಟನೆ ನಡೆದಿದೆ. ಮೆರವಣಿಗೆಯಲ್ಲಿ ಬಿಜೆಪಿಯ ದತ್ತಾತ್ರಿ, ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್,  ಶಾಸಕ ಚೆನ್ನಬಸಪ್ಪ, ಜಿಲ್ಲಾ ಬ್ರಾಹ್ಮಣ ಮಹಾಸಭದ ಅಧ್ಯಕ್ಷ ನಟರಾಜ್ ಭಾಗವತ್ ಮೊದಲಾದವರು ಭಾಗಿಯಾಗಿದ್ದರು. 

Silent protest by Vipra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close