ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿವಾಹಿತ ಮಹಿಳೆ-Married woman found hanging

 Suddilive || Shivamogga

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿವಾಹಿತ ಮಹಿಳೆ-Married woman found hanging

Found, hanging

ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯ ಕಾಶಿಪುರದಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯ ಕುಟುಂಬ ಕಣ್ಣೀರು ಹಾಕಿದೆ. 

ಇಂದು ಬೆಳಿಗ್ಗೆ ಸ್ವಾತಿ ಎಂಬ 28 ವರ್ಷದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯ ಲಾಕರ್ ಒಡೆದು ನೋಡಿದಾಗ ಮಹಿಳೆ ಸ್ಟೀಲ್ ಏಣಿಯ ಸಹಾಯದಿಂದ ವೇಲಿಗೆ ನೇಣು ಬಿಗಿದು ಸಾವನ್ನಪ್ಪಿರುವುದು ತಿಳಿದು ಬಂದಿದೆ. 

ಆತ್ಮಹತ್ಯೆಗೆ ಗಂಡ ಹೆಂಡತಿಯ ಜಗಳವೇ ಕಾರಣ ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಅಷ್ಟೆ ಪ್ರದೀಪ್ ಮತ್ತು ಸ್ವಾತಿ ಮದುವೆಯಾಗಿದ್ದು ಇಬ್ಬರಿಗೂ ಒಂದು ವರ್ಷದ ಹೆಣ್ಣು ಮಗುವಿದೆ. ತಾಯಿಯನ್ನ ಕಳೆದುಕೊಂಡ ಮಗು ತಬ್ಬಲಿಯಾಗಿದೆ. 

ಗಂಡ ಪ್ರದೀಪ್ ಶಾಲಾ ಬಸ್ ಹಾಗೂ ಕಾರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಘಟನೆಯ ನಂತರ ಪ್ರದೀಪ್ ಪೊಲೀಸರ ವಶದಲ್ಲಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Married woman found hanging

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close