ಗೂಂಡಾಗಿರಿ ವರ್ತನೆ ಪ್ರದರ್ಶಿಸಿದ್ರಾ ವಿಧಾತ್ರಿ ಭವನದ ಮಾಲೀಕರು?Vidhatri Bhavan

 Suddilive || Shivamogga

ಗೂಂಡಾಗಿರಿ ವರ್ತನೆ ಪ್ರದರ್ಶಿಸಿದ್ರಾ ವಿಧಾತ್ರಿ ಭವನದ ಮಾಲೀಕರು? -Did the owner of Vidhatri Bhavan display Goondaism?

Vidhathri, Bhavan


ಶಿವಮೊಗ್ಗದ ಖ್ಯಾತ ಹೋಟೆಲ್ ನ ಮಾಲೀಕ ಮತ್ತು ಸಿಬ್ಬಂದಿಯ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಟ್ನಿ ವಿಚಾರದಲ್ಲಿ ಗಲಾಟೆಯಾಗಿದ್ದು ಗಲಾಟೆಯಲ್ಲಿ ಹಲ್ಲೆಗೊಳದವರಿಂದ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗ ಗೋಪಾಳ ಗೌಡ ಬಡಾವಣೆಯಲ್ಲಿರುವ ವಿಧಾತ್ರಿ ಭವನದಲ್ಲಿ ನಿನ್ನೆ ಕಾಶಿಪುರದ ನಿವಾಸಿಯೊಬ್ಬರು ಇಡ್ಲಿ, ವಡ, ಚಟ್ನಿ ಸಾಂಬಾರ್ ಪಾರ್ಸಲ್ ಪಡೆದಿದ್ದಾರೆ. ಮನೆಗೆ ಹೋಗಿ ತಿಂದಾಗ ಚಟ್ನಿ ಹಳಸಿದಂತೆ ಕಂಡು ಬಂದಿದೆ. ಇದನ್ನ ಹೋಟೆಲ್ ನವರಿಗೆ ತಿಳಿ ಬರುತ್ತೇನೆಂದು ಮಗ ಶಶಾಂಕ್ ತಂದೆ ಅಂಜನಪ್ಪನವರಿಗೆ ತಿಳಿಸಿ ಹೋಗಿದ್ದಾರೆ.

ಸುಮಾರು 10 ರಿಂದ 11 ಗಂಟೆಯ ಸುಮಾರಿಗೆ ಚಟ್ನಿ ಹಳಸಿದೆ ಎಂದು ಮಾಲೀಕ ಅವಿನಾಶಗೆ ಶಶಾಂಕ್ ತಿಳಿಸಿದ್ದಾರೆ. ಸಾರ್ವಜನಿಕವಾಗಿ ನಮ್ಮ ಹೋಟೆಲ್ ಹೆಸರು ಕೆಡೆಸಲು ಈ ರೀತಿ ಮಾಡುತ್ತೀರ ಎಂದು ಅಡ್ಡಗಟ್ಟಿ ಥಳಿಸಿರುವುದಾಗಿ ಆರೋಪಿಸಲಾಗಿದೆ. ಶಶಾಂಕ್ ಗಲಾಟೆಯಾಗುತ್ತಿದ್ದಂತೆ ತಂದೆಗೆ ಕರೆ ಮಾಡಿದ್ದಾರೆ. 

ಮುಖಕ್ಕೆ, ಮೂಗು, ಕಿವಿ, ತಲೆ, ಕೈ ಕಾಲುಗಳಿಗೆ ಹೊಡೆತ ಬಿದ್ದ ಕಾರಣ ಅವರನ್ನ ಮೆಗ್ಗಾನ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಿಂದ ಹೋಟೆಲ್ ಮಾಲೀಕರ ಗೂಂಡಾಗಿರಿ ಬೆಳಕಿಗೆ ಬಂದಿದೆ. 

Vidhatri Bhavan

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close