ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ-ಡಿ.ಎಸ್.ಅರುಣ್-mental stability

Suddilive || Shivamogga

 ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ-ಡಿ.ಎಸ್.ಅರುಣ್-CM Siddaramaiah has lost mental stability - D.S. Arun

Mental, stability


ರಾಜ್ಯದಲ್ಲಿ ಸರ್ಕಾರದ ಮಾನಸಿಕತೆ ಮತ್ತು ಸಿಎಂ ಸಿದ್ದರಾಮಯ್ಯ ಸಮತೋಲನ ಕಳೆದುಕೊಂಡ್ರಾ ಎಂಬ ಅನುಮಾನವನ್ನ ಎಂಎಲ್ ಸಿ ಅರುಣ್ ವ್ಯಕ್ತಪಡಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸಿ, ಎಸ್ಪಿ ಮೊದಲಾದ ಅಧಿಕಾರಿಗಳಿಗೆ ವೇದಿಕೆ ಮೇಲೆ ಬೈಯುತ್ತಾರೆ. ಎಎಸ್ಪಿ ಮೇಲೆ ವೇದಿಕೆ ಮೇಲೆ ಹೊಡೆಯಲು ಹೋಗುವ ಸ್ಥಿತಿಯಲ್ಲಿ ಸಿದ್ದಾರಾಮಯ್ಯ ಇದ್ದಾರೆ. ಕಪ್ಪು ಬಾವುಟ ಎತ್ತಿರುವುದು ಮೊದಲಬಾರಿಗೆ ಅಲ್ಲ ಎಂದರು. 

ಯುದ್ದ ಬೇಡ, ಅವಶ್ಯಕತೆಯಿಲ್ಲ, ಇಂಟೆಲಿಜೆನ್ಸಿ ಫೇಲ್ಯೂರ್ ಎಂದು ಹೇಳುವ ಸಿದ್ದರಾಮಯ್ಯರಿಗೆ ಮಹಾತ್ಮಗಾಂಧಿ, ರಾಜೀವ್ ಗಾಂಧಿ, ಇಂದಿರಾಗಾಂಧಿ ಹತ್ಯೆ ನಡೆದಾಗ, ತಾಜ್ ಅಟ್ಯಾಕ್, ಸಂಸತ್ ಅಟ್ಯಾಕ್  ನಡೆದಾಗ ಸೆಕ್ಯೂರಿಟಿ ಲ್ಯಾಪ್ಸ್ ಅನಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು. 

ಕಪ್ಪು ಬಾವುಟ ಪ್ರದರ್ಶಿಸಿದ ಮಹಿಳೆಯ ಮೇಲೆ ಪ್ರಕರಣ ದಾಖಲಿಸುವ ಸಿದ್ದರಾಮಯ್ಯರಿಗೆ ವಿಧಾನ ಸಭೆಯ ಪಡಸಾಲೆಯಲ್ಲಿ ಪಾಕಿಸ್ತಾನಕ್ಕೆ ಜೈ ಕೂಗಿದವರನ್ನ ಬಜಾವ್ ಮಾಡಲು ನಿಲ್ಲುತ್ತಾರೆ. ಅವರ ಬಂಡತನ ಸರಿಯಲ್ಲ. ತಪ್ಪುಗಳನ್ನ ಮುಚ್ಚಿಕೊಂಡು ಖಜಾನೆ ಖಾಲಿಯಾದ ಪರಿಸ್ಥಿತಿಯಿಂದ ಬಜಾವಾಗಲು ಸಿದ್ದರಾಮಯ್ಯ ಹತಾಶೆ ಮನೋಭಾವನೆ ಪ್ರದರ್ಶಿಸಿದ್ದಾರೆ ಎಂದು ದೂರಿದರು. 

ಡಿಕೆಶಿ ಅವರು ಬಿಜೆಪಿ ಹದ್ದಬಸ್ತಿನಲ್ಲಿರಿ ಎಂದಿದ್ದಾರೆ. ನಮ್ಮನ್ನ ನಿಯಂತ್ರಿಸಲು ಬಂದರೆ ಪ್ರತಿ  ಭೂತ್ ನಲ್ಲಿ ನಿಮ್ಮ ವಿರುದ್ಧ ಪ್ರತಿಭಟಿಸಲಾಗುವುದು ಎಂದ ಅರುಣ್ 136 ಸ್ಥಾನ ನೀಡಿರುವುದರ ಬಗ್ಗೆ ಅರಿತುಕೊಳ್ಳಿ, ಜನ ದಂಗೆ ಏಳುವ ಮುನ್ನ ಎಚ್ಚೆತ್ತುಕೊಳ್ಳಿ ಎಂದರು. 

ಕಳೆದ 11 ವರ್ಷದಿಂದ ಸ್ಥಿತಿ ಗತಿಗಳ ಬದಲಾಗಿದೆ. ಕಾಶ್ಮೀರದ ಸ್ಥಳೀಯರು ಅರಿತುಕೊಳ್ಳಬೇಕು. ಅವರ ಪ್ರವಾಸೋದ್ಯಮ ಅರಿತುಕೊಳ್ಳಬೇಕು. ರಕ್ಷಣೆ ಮಾಡುವರ ಮನಸ್ಥಿತಿ ಕುಗ್ಗಿಸೋದು ಸರಿಯಲ್ಲ ಎಂದು ಕಿವಿ ಮಾತನಾಡಿದರು. 

Mental stability

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close