ಮುಸ್ಲೀಂ ಸಂಘಟನೆಯಿಂದ ಮೊಳಗಿದ ಭಾರತ್ ಮಾತಾಕಿ ಜೈ ಘೋಷಣೆ- Muslim organization

 Suddilive || Shivamogga

Bharat Mata Ki Jai slogan raised by Muslim organization

Muslim, organization

ಭಾರತದಲ್ಲಿ ಹೆಚ್ಚಾಗುತ್ತಿರುವ ಉಗ್ರರ ಉಪಟಳದ ವಿರುದ್ಧ ಮುಸ್ಲೀಂ ಸಂಘಟನೆ ಧ್ವನಿ ಎತ್ತಿದೆ. ಅಮರ್ ರಹೇ ಅಮರ್ ರಹೇ.. ಮಂಜುನಾಥ್ ಅಮರ್ ರಹೇ. ಭಾರತ್ ಮಾತಾಕಿ ಘೋಷಣೆಗಳು ಕೇಳಿ ಬಂದಿದೆ. 

ಇದರಿಂದ ನೊಂದ ಕುಟುಂಬದವರೊಂದಿಗೆ ನಾವಿದ್ದೇವೆ ಎಂದು ಮರ್ಕಜ್ ಸುನ್ನಿ ಜಾಮಿಯಾ‌ ಮಸ್ಜಿದ್ ಭಾವೈಕ್ಯತೆ ಸಾರಿದೆ. ನಿನ್ನೆ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನ ಖಂಡಿಸುತ್ತೇವೆ. ಯಾರೇ ಉಗ್ರ ಸಂಘಟನೆಗೆಳು ಇದ್ದರು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.

ಗಾಂಧಿ ಬಜಾರ್ ನ ಮರ್ಕಜ್ ಸುನ್ನಿ ಜಾಮಿಯಾ ಮಸ್ಜಿದ್ ನ ಅಧ್ಯಕ್ಷ ಮುನಾವರ್ ಪಾಷ, ಕಾಂಗ್ರೆಸ್  ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷರವರ ನೇತೃತ್ವದಲ್ಲಿ ಇಂದು ಕಾಶ್ಮೀರದಲ್ಲಿ ನಿನ್ನೆ ನಡೆದ ಉಗ್ರರ ದಾಳಿಯನ್ನ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ರೀತಿಯ ಉಗ್ರರ ಅಟ್ಟಹಾಸವನ್ನ ಮೆರೆಯದಂತೆ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Muslim organization

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close