Suddilive || Shivamogga
ಬಿಇಡಿ ವಿದ್ಯಾರ್ಥಿಗಳಿಗೆ ಮೂಲ ಮುದ್ರಿತ ಅಂಕ ಪಟ್ಟಿಕೊಡಿ-ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ಆಗ್ರಹ-Banjara Youth and Students Association demands original printed mark sheets for BED students
ಕುವೆಂಪು ವಿಶ್ವ ವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ರಾಜ್ಯ ಬಂಜಾರ ಯುವಕರ ಸಂಘ ಮತ್ತು ಎಬಿವಿಪಿ ಜಿಲ್ಲಾ ಘಟಕ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದೆ.
ಬಿಎಡ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಇದುವರದಗೂ ಯಾವುದೇ ಮೂಲ ಮುದ್ರಿತ ಅಂಕ ಪಟ್ಟಿಗಳನ್ನ ವಿಶ್ವ ವಿದ್ಯಾಲಯ ನೀಡಿಲ್ಲ. 19 ಬಿ ಇಡಿ ಕಾಲೇಜುಗಳಲ್ಲಿ ಶಿಕ್ಷಕರ ತರಬೇತಿ ಪಡೆದು ಫಲಿತಾಂಶವನ್ನ ಪಡೆದಿರುತ್ತಾರೆ.
ವರ್ಷದ ಯಾವುದೇ ಸೆಮಿಸ್ಟರ್ ಮೂಲ ಮುದ್ರಿತ ಅಂಕ ಪಟ್ಟಿಗಳನ್ನ ನೀಡದೆ ಭವಿಷ್ಯಕ್ಕೆ ತೊಂದರೆಯಾಗಿದೆ. ಈ ಕುರಿತು ಅವ್ಯವಸ್ಥೆಯ ಬಗ್ಗೆ ಮನವಿ ಪತ್ರಗಳನ್ನ ನೀಡಿದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಮುಂದಿನ 15 ದಿನಗಳ ಒಳಗಾಗಿ ಮುದ್ರಿತ ಅಂಕಪಟ್ಟಿಯನ್ನ ಎಲ್ಕಾ ಬಿ.ಇಡಿ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಜೀವನಕ್ಕೆ ಸಹಕರಿಸಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕ ಮನವಿ ಮಾಡಲಾಗಿದ್ದು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಮನವಿಯಲ್ಲಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿಆರ್ ಗಿರೀಶ್, ಉಮಾಮಹೇಶ್ವರ್ ನಾಯ್ಕ್, ವೆಂಕಟೇಶ್, ಅಲೋಕ, ಸ್ಪಂದನ, ರಮೇಶ್, ನರಸಿಂಹ ಹಾಗೂ ಎಬಿವಿಪಿಯ ಪ್ರಿಯಾಂಕ, ಸ್ಪಂದನ, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.
Banjara Youth and Students Association demands