Suddilive || Shivamogga
ಮನೆಗೆ NIA ಭೇಟಿ ಕೊಡಲಿದೆ-ಪಲ್ಲವಿ-NIA will visit the house-Pallavi
ನಮ್ಮ ಮನೆಗೆ NIA ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂದು ಕಾಶ್ಮೀರದಲ್ಲಿ ಉಗ್ರರ ಗುಙಡಿಗೆ ಬಲಿಯಾದ ಮಂಜುನಾಥ ಅವರ ಪತ್ನಿ ಪಲ್ಲವಿ ತಿಳಿಸಿದ್ದಾರೆ
ಮಾಧ್ಯಮಗಳಿಗೆ ಮಾತನಾಡಿದ ಅವರು, ಇಬ್ಬರು ಪೊಲೀಸರು ಬಂದು ನಮಗೆ ತಿಳಿಸಿದ್ದಾರೆ. ನಮ್ಮನೆಗೆ ಬರ್ತಿವಿ ಎಂದು ತಿಳಿಸಿದ್ದಾರೆ. ಆದರೆ ಎಷ್ಟೋತಿಗೆ ಬರ್ತಾರೆ ಅಂತಾ ತಿಳಿಸಿಲ್ಲ ಎಂದರು.
ನಾವು ಅಂದು ಪೆಹಲ್ಗಾಮ್ ಗೆ ಮಧ್ಯಾಹ್ನ 12 ವರೆಗೆ ತಲುಪಿದ್ದೆವು. ಘಟನೆ ನಡೆದ ವ್ಯಾಲಿ ಸ್ಥಳಕ್ಕೆ ಮಧ್ಯಾಹ್ನ 1 ವರೆ, 1 ಮುಕ್ಕಾಲಿಗೆ ತಲುಪಿದ್ದೆವು. ನಾವು ಅಲ್ಲಿ ಕುದುರೆಯಿಂದ ಇಳಿದ ಕೂಡಲೇ ಫೈರಿಂಗ್ ನಡೆಯಿತು. ಸುಮಾರು 2 ಗಂಟೆ ಸಮಯದಲ್ಲಿ ಫೈರಿಂಗ್ ನಡೆಯಿತು. ಆಗ ಅಲ್ಲಿ ಲೆಫ್ಟಿನೆಂಟ್ ಅವರಿಗೆ ಸ್ವಲ್ಪ ಉಸಿರಿತ್ತು. ನನ್ನ ಪತಿಗೂ ಹಾಗೂ ಲೆಫ್ಟಿನೆಂಟ್ ಗೆ ಕುತ್ತಿಗೆ ಭಾಗದಲ್ಲೇ ಫೈರ್ ಆಗಿತ್ತು ಎಂದರು.
ಧರ್ಮ ಕೇಳಿ ಹಿಂದೂ, ಮುಸಲ್ಮಾನರಿಗೆ ಬೇರ್ಪಡಿಸಿ ಶೂಟ್ ಮಾಡಿದ್ದು ಹೌದು. ಆದರೆ ಅದನ್ನು ನಾನು ನೋಡಿದ ಹಾಗೆ ಮಾಡಿಲ್ಲ. ಅದನ್ನು ನನಗೆ ಹೊಟೆಲ್ ನಲ್ಲಿ ಬೇರೆಯವರು ಹೇಳಿದ್ದರು. ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ. ನನ್ನ ಪತಿ ಹಾಗೂ ಲೆಫ್ಟಿನೆಂಟ್ ಗೆ ಒಮ್ಮೆಲೆ ಫೈರ್ ಮಾಡಿದ್ದರು ಎಂದರು.
ಬಳಿಕ ಉಗ್ರಗಾಮಿಗಳು ತೆರಳುವಾಗ ನಾನು ಕೂಗಿದೆ. ಹಮೇ ಭಿ ಮಾರ್ ದೋ ಎಂದು ಹೇಳಿದ್ದೆ. ಆಗ ನನ್ನ ಮಗ ಅವರ ಬಳಿ ಕುತ್ತೆ ಹಮೇ ಮಾರೋ ಎಂದು ಹೇಳಿದ್ದು ನಿಜ. ಇದನ್ನು ನಿಜ ಎಂದು ಸಾಬೀತು ಪಡಿಸಲು ನಾನು ವಿಡಿಯೋ ಮಾಡಬೇಕಿತ್ತು ಅಷ್ಟೇ. ಸಾಕು ಸರ್ ಇನ್ನು ನಾನು ಏನೂ ಮಾತನಾಡಲ್ಲ. ಈಗಾಗಲೇ ಹಲವಾರು ನೆಗೆಟಿವ್ ಕಾಮೆಂಟ್ಸ್ ಗಳು ವಿನಾಕಾರಣ ಬಂದಿವೆ ಎಂದು ಮಾದ್ಯಮಗಳೆದುರು ಬೇಸರ ವ್ಯಕ್ತಪಡಿಸಿದರು.
NIA will visit the house-Pallavi