Suddilive || Shivamogga
War is needed, Siddaramaiah is not my CM, those who are against humanity have no choice - Chakravarthy Sulibele
ಉಗ್ರರ ಗುಂಡಿಗೆ ಕಾಶ್ಮೀರದಲ್ಲಿ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್ ಅವರ ಮನೆಗೆ ಗಣ್ಯರ ಭೇಟಿ ಮುಂದು ವರೆದಿದೆ. ಮಂಜುನಾಥರವರ ಬಲಿದಾನವಾಗಿ ಇವತ್ತಿಗೆ 7 ದಿನ ಕಳೆದಿದೆ. ಅವರಿಗೆ ಸಾಂತ್ವಾನ ಹೇಳುವಿಕೆ ಮುಂದುವರೆದಿದೆ.
ಇಂದು ಚಕ್ರವರ್ತಿ ಸೂಲಿಬೆಲೆ ಮತ್ತು ರೇಣುಕಾಚಾರ್ಯ ಭೇಟಿಯಾಗಿ ಪತ್ನಿ ಪಲ್ಲವಿ ಮತ್ತುಮಗ ಅಭಿಜೈರನ್ನ ಮಾತನಾಡಿಸಿದ್ದಾರೆ. ಘಟನೆಯ ಕರಾಳತೆಯ ಬಗ್ಗೆ ಪತ್ನಿ ಪಲ್ಲವಿ ತಿಳಿಸಿದ್ದು ಅವರನ್ನ ಸಾಂತ್ವಾನಿಸಿದ್ದಾರೆ. ಮಂಜುನಾಥ್ ಮಗನ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ.
ಅವರನ್ನ ನೋಡಿದರೆ ಹೆಮ್ನೆಯಾಗುತ್ತದೆ-ಸೂಲಿಬೆಲೆ
ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಮನೆಗೆ ನಿನ್ನೆ ಭೇಟಿ ನೀಡಿದ್ದೆ. ಅವರನ್ನು ನೋಡಿದರೆ ನನಗೆ ಹೆಮ್ಮೆ ಆಗುತ್ತದೆ
ಅವರ ತಾಯಿ ಮಗ ಹಾಗೂ ಹೆಂಡತಿ ಅವರ ಧೈರ್ಯವನ್ನು ನೋಡಿದರೆ ಎಲ್ಲರಿಗೂ ಹೆಮ್ಮೆಯಾಗುತ್ತದೆ. ಅವರಿಗೆ ನಾವು ಸಾಂತ್ವನ ಮಾತ್ರ ಕೊಡಲು ಸಾಧ್ಯ. ಪ್ರಧಾನಿಯರಲ್ಲಿ ಬೇಡಿಕೊಳ್ಳುವುದೇನೆಂದರೆ ನಮಗೆ ಸಾಂತ್ವನ ಬೇಕಾಗಿಲ್ಲ ಪ್ರತೀಕಾರ ಬೇಕಾಗಿದೆ. ಪ್ರತೀಕಾರ ಒಂದೇ ಈ ಲಾಜಿಕಲ್ ಎಂಡ್ ಮಾಡಲು ಸಾಧ್ಯವಾಗುತ್ತದೆ ಎಙದರು.
ಸಿಎಂ ಸಿದ್ದರಾಮಯ್ಯ ನನ್ನ ಸಿಎಂ ಅಲ್ಲ
ಸಿಎಂ ಸಿದ್ದರಾಮಯ್ಯ ಅವರ ಯುದ್ಧ ಬೇಡ ಎಂಬ ಹೇಳಿಕೆ ವಿಚಾರದಲ್ಲಿಯೂ ಪ್ರತಿಕ್ತಿಯಿಸಿದ ಚಕ್ರವರ್ತಿ ಸೂಲಿಬೆಲೆ ಸಿದ್ದರಾಮಯ್ಯ ನನ್ನ ಮುಖ್ಯಮಂತ್ರಿ ಅಲ್ಲ. ನಾನು ಅವರನ್ನು ನನ್ನ ಸಿಎಂ ಎಂದು ಒಪ್ಪಿಕೊಳ್ಳುವುದಿಲ್ಲ. ರಾಷ್ಟ್ರದ ವಿಚಾರ ಬಂದಾಗ ಯಾರು ತೆವಳಿಕೊಂಡು ಹೋಗುತ್ತಾರೋ ಅವರು ನನ್ನ ಸಿಎಂ ಅಲ್ಲ. ಒಂದು ತರ ಮನಮೋಹನ್ ಸಿಂಗ್ ಅವರ ಮುಂದುವರೆದ ಭಾಗವನ್ನು ನಡೆಸಿಕೊಂಡು ಹೋಗಲು ಅವರು ಭಾವಿಸಿದ್ದಾರೆ.
ಪ್ರಧಾನಿ ಮೋದಿಯವರು ಭಾರತದ ಒಬ್ಬನಿಗೂ ನೋವಾದರೆ ಪ್ರತಿಕಾರ ತೆಗೆದುಕೊಳ್ಳುವಂತವರು. ಸಚಿವ ತಿಮ್ಮಾಪುರ ವಿವಾದತ್ಮಕ ಹೇಳಿಕೆಯನ್ನ ವಿವಾದನಾತ್ಮಕ ಎಂದು ಹೇಳೋದೆ ತಪ್ಪು. ಅದು ಒಂದು ದೇಶ ದ್ರೋಹ. ತಿಮ್ಮಾಪುರ ಅವರು ಈ ದೇಶದ ದಾರಿಯನ್ನ ತಪ್ಪಿಸುವುದಕ್ಕೆ ನೋಡುತ್ತಿದ್ದಾರೆ. ಅವರು ದೇಶದ್ರೋಹದ ಜೊತೆಗೆ ಮಾನವೀಯತೆಗೆ ವಿರುದ್ಧ ಇದ್ದಾರೆ ಅದಕ್ಕೆ ಧಿಕ್ಕಾರ ಎಂದರು.
ವೋಟ್ ಬ್ಯಾಂಕ್ ಗಾಗಿ ಸತ್ತ ಸಾರ್ವಜನಿಕರ ಹೇಳಿಕೆಯನ್ನ ಒಪ್ಪಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ
ನಾನು ಮಂಜುನಾಥ ಅವರ ಪತ್ನಿಯನ್ನ ಮಾತನಾಡಿಸಿದ್ದೇನೆ. ಅವರು ಹೇಳುವ ಪ್ರಕಾರ ಹಿಂದೂ ಆದವರಿಗೆ ಮಾತ್ರ ಸಾಯಿಸಲಾಗಿದೆ ಎಂದು ಹೇಳಿದ್ದಾರೆ. ಇದು ಇಡೀ ಜಗತ್ತಿಗೆ ಗೊತ್ತಾಗಿದೆ. ಎಲ್ಲಿ ಓಟ್ ಬ್ಯಾಂಕ್ ತಪ್ಪಿ ಹೋಗುತ್ತದೆ ಎಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ನಾಚಿಕೆ ಆಗಬೇಕು ನಿಮಗೆ ನಿಮ್ಮನ್ನ ನಾವು ಸಚಿವರೆಂದು ನೋಡುತ್ತಿರುವುದು ದುರಂತದ ಸಂಗತಿ ಎಂದರು.
ಇದನ್ನ ವಿ ಎಚ್ ಪಿ ಬಜರಂಗದಳ ಹಾಗೂ ಆರ್ ಎಸ್ ಎಸ್ ಹುಟ್ಟು ಹಾಕಿದ ವಿವಾದ ಅಲ್ಲ ಇದು. ನೇರವಾಗಿ ಆರಂಭದಲ್ಲಿ ಬಲಿಯಾದವರ ಮನೆಯವರು ಹೇಳಿದಂತ ವಿಚಾರ ಅದು. ಈ ರೀತಿ ಮಾತನಾಡುವುದಕ್ಕೆ ನಾಚಿಕೆ ಆಗೋದಿಲ್ಲವೇ? ನಿಮಗೆ ವೋಟ್ ನೀಡಿದ ಮತದಾರರು ಇವತ್ತು ತಲೆತಗ್ಗಿಸುವಂತಾಗಿದೆ.
ಇದು ಮುಸಲ್ಮಾನರಿಗೂ ಅಸಹ್ಯ ಅನಿಸುತ್ತದೆ. ತೀರ ನಮ್ಮನ್ನ ಸಮರ್ಥಿಸಿಕೊಳ್ಳಲು ಈ ರೀತಿ ಕೆಳಮಟ್ಟಕ್ಕೆ ಇಳಿಯಬಾರದು ಎಂದು ಮುಸಲ್ಮಾನರಿಗೂ ಅನಿಸುತ್ತದೆ. ಕರ್ನಾಟಕಕ್ಕೆ ಈ ರೀತಿಯ ಸರ್ಕಾರ ಇರುವುದು ನಿಜಕ್ಕೂ ಒಂದು ರೀತಿಯಲ್ಲಿ ಬೇಸರದ ಸಂಗತಿಯಾಗಿದೆ. ಪಾಕಿಸ್ತಾನದ ರೈಲ್ವೆ ಸಚಿವನ ಅಣುಬಾಂಬ್ ಬೆದರಿಕೆ ವಿಚಾರವನ್ನ ಬಿಚ್ಚಿಟ್ಟ ಸೂಲಿಬೆಲೆ ಪಾಕಿಸ್ತಾನ ಪತರಗುಟ್ಟಿ ಹೋಗಿದೆ.
ಪಾಕ್ ಪದರಗುಟ್ಟಿ ಹೋಗಿದೆ
ಅಣು ಬಾಂಬನ್ನ ಇಟ್ಟುಕೊಂಡಿರುವ ಈ ಬುದ್ಧಿವಂತರು ನೇರವಾಗಿ ಚೀನಾಕ್ಕೆ ಹೋಗಿ ದಯಮಾಡಿ ನಮ್ಮನ್ನು ಕಾಪಾಡಿಯಂದು ಅಂಗಲಾಚಿದ್ದಾರೆ. ಇದರ ಅರ್ಥ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಪಾಕಿಸ್ತಾನಕ್ಕೆ ಗೊತ್ತಾಗಿದೆ ನರೇಂದ್ರ ಮೋದಿ ಸಾಮಾನ್ಯ ಮನುಷ್ಯ ಅಲ್ಲ ಅಂತ.ಅದೇ ರೀತಿ ಕಾಂಗ್ರೆಸ್ ಗೂ ಕೂಡ ಅರ್ಥ ಆಗಿದೆಸಿದ್ದರಾಮಯ್ಯ ಹಾಗೂ ತಿಮ್ಮಾಪುರ ಅಂತವರು ಪಾಕಿಸ್ತಾನದ ರಕ್ಷಣೆಗೆ ನಿಂತಿದ್ದಾರೆ ಅನಿಸುತ್ತದೆ.
ಇಲ್ಲಿನ ಕಾಂಗ್ರೆಸ್ ನಾಯಕರಿಗೆ ನಡುಕ ಶುರುವಾಗಿದೆ ಅಂದರೆ ಇನ್ನು ಪಾಕಿಸ್ತಾನದಲ್ಲಿರುವ ರಿಗೆ ಯಾವ ರೀತಿ ನಡುಕ ಶುರುವಾಗಿರಬಹುದು. ಇಡೀ ಪಾಕಿಸ್ತಾನವನ್ನೇ ನಾಶ ಮಾಡುವಷ್ಟು ಅಣುವಸ್ತ್ರ ನಮ್ಮ ಬಳಿಯೂ ಇದೆ. ನಿಮ್ಮ ಎಫ್ 16 ಯುದ್ಧ ವಿಮಾನಗಳನ್ನು ನಮ್ಮ ಮಿರಜ್ ವಿಮಾನಗಳು ಹೊಡೆದು ಉರುಳಿಸಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಮೆಗ್ನಿಂದ ಎಫ್ 16 ವಿಮಾನವನ್ನು ಕಳೆದುಕೊಂಡ ಅಸಾಹಕರು ಪಾಕಿಸ್ತಾನದವರು.
ಯುದ್ಧ ಬೇಕಿದೆ
ಇಂದು ನಮ್ಮ ಬಳಿ ರಫೆಲ್ನಂತಹ ಯುದ್ಧ ವಿಮಾನಗಳಿವೆ. ನಮಗೆ ವಿಶೇಷವಾದ ಧೈರ್ಯವಿದೆ ನಿಮ್ಮ ತಾಕತ್ತು ನೀವು ತೋರಿಸಿ ನಮ್ಮ ತಾಕತ್ತು ನಾವು ತೋರಿಸುತ್ತೆವೆ. ನನಗಂತೂ ಯುದ್ಧ ಆಗುವುದು ಬೇಕೇ ಬೇಕು. ಒಂದು ಸಾರ್ವಭೌಮ ರಾಷ್ಟ್ರದ ಮೇಲೆ ಈ ರೀತಿ ಮಾಡುತ್ತಾರೆಂದರೆ ಅವರಿಗೆ ಸರಿಯಾದ ಪಾಠ ಕಲಿಸಬೇಕು.
ಯುದ್ಧ ಬೇಡವಾದರೆ ನಿಮ್ಮ ಸೇನಾಧಿಕಾರಿಯನ್ನ ಕೆಳಗಿಳಿಸಿ ಆಗ ಯುದ್ಧವನ್ನು ನಿಲ್ಲಿಸಬಹುದು. ಆಸಿಫ್ ಮುನೀರ್ ನನ್ನು ಪಾಕಿಸ್ತಾನದ ಜನರೇ ಒಡೆದರೆ ನನಗೆ ಯುದ್ದ ಬೇಡ ಎಂದರು.
Siddaramaiah is not my CM