suddilive || shivamogga
ನೌಹೀರಾ ಶೇಖ್ ವಿರುದ್ಧ ಸುದ್ದಿಗೋಷ್ಠಿ-Press conference against Nowhira Sheikh
ನೌಹೀರಾ ಶೇಖ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದೆ. ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ ಸಾಫ್ಟ್ ವೇರ್ ಕಂಪನಿಯ ಮೊಹಮದ್ ಅಖೀಲ್ ಮತ್ತು ಮೊಹಮದ್ ಮುನೀಬ್ ಖಾನ್ ಪರ ವಕೀಲ ಪ್ರದೀಪ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗದ 1 ಹೆಲ್ಪ್ ಟೆಕ್ನಾಲಜಿ ಮತ್ತು ಸಾಫ್ಟ್ ಸಲೂಷನ್ ಪ್ರೈವೆಟ್ ಲಿಮಿಟೆಡ್ ನ್ನ 9,84,24,292 ರೂ. ಗೆ ಖರೀದಿಸಲು ಮುಂದಾಗಿದ್ದು ಇದಕ್ಕೆ 1,38,00,000/- ರೂ. ಹಣ ನೀಡಿದ್ದು ಉಳಿದ 8,46,24,292 ರೂ ಬಾಕಿ ಉಳಿಸಿಕೊಂಡಿದ್ದು ಇದನ್ನ ಕೇಳಲು ಹೋದ ಇವರ ಕ್ಲೈಂಟ್ ಮುನೀಬ್ ಮತ್ತು ಅಖೀಲ್ ಹೈದರಾಬಾದ್ ನಲ್ಲಿ ಕೇಳಲು ಹೋಗಿದ್ದಕ್ಕೆ ಹಲ್ಲೆ ನಡೆಸಲಾಗಿದೆ.
ನೌಹಿರಾ ಶೇಖ್ ವಿರುದ್ಧ ಹೈದ್ರಾಬಾದ್ ನ ಬಂಜಾರ ಹಿಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದೂರು ದಾಖಲಿಸಲಾಗಿದೆ. ಜೊತೆಗೆ ವಂಚನೆ ಪ್ರಕರಣ ನಡೆದ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈಗ ಪ್ರಕರಣ ಶಿವಮೊಗ್ಗದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ಕೋರ್ಟ್ ನಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಪೊಲೀಸರು ಇವರನ್ನ ಹುಡುಕಿಕೊಂಡು ಹೋದಾಗ ಹೈದ್ರಾಬಾದ್ ನ್ನ ಖಾಲಿ ಮಾಡಿಕೊಂಡು ತಿರುಪತಿಗೆ ಹೋಗಿದ್ದಾರೆ.
ನೌಹೀರ ಅವರು ಪೊಲಿಟಿಕಲ್ ಪಾರ್ಟಿಯನ್ನ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಇವರು ಗಳು ನಮ್ಮ ಕ್ಲೈಂಟ್ ವಿರುದ್ಧ ವಿಡಿಯೋವೊಂದಿಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾವೆಲ್ಲ ಮೋಸ ಮಾಡಿ ದೂರು ದಾಖಲಿಸಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದರು.
ನೌಹೀರಾ ಶೇಖ್ ವಿರುದ್ಧ ಸುಪ್ರೀಂ ಕೋರ್ಟ್ 5600 ಕೋಟಿ ರೂ. ಹಣ ಹಂಚಬೇಕಿದೆ ಎಂದು ಸೂಚನೆ ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಖೀಲ್ ಮತ್ತು ಮುನೀಬ್ ಖಾನ್ ಉಪಸ್ಥಿತರಿದ್ದರು.
Nowhira Sheikh