Suddilive || Thirthahalli
ಕಾರುಗಳ ನಡುವೆ ಡಿಕ್ಕಿ ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ ಸಾವು-DCC Bank employee dies in collision between cars
ಎರಡು ಕಾರುಗಳ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಈರ್ವ ಸಾವನ್ನಪ್ಪಿದ್ದು ಸಾವನ್ನಪ್ಪಿದ ವ್ಯಕ್ತಿಯನ್ನ ತೀರ್ಥಹಳ್ಳಿಯ ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ ಎಂದು ತಿಳುದು ಬಂದಿದೆ. ಉಳಿದ ಮೂವರಿಗೆ ಗಾಯಗಳಾಗಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀರ್ಥಹಳ್ಳಿಯಿಂದ ಆಗುಂಬೆ ಕಡೆಗೆ ಹೊರಟಿದ ಮಾರುತಿ ಸುಜೂಕಿ ಎಸ್ಟಿಮೋ ಮತ್ತು ಆಗುಂಬೆಯಿಂದ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಬೊಲೆರೋ ವಾಹನಕ್ಕೆ ಶಿವರಾಜ್ ಪುರದಲ್ಲಿ ಅಪಘಾತ ಸಂಭವಿಸಿದೆ. ಎಸ್ಟಿಮೋ ಕಾರಿನಲ್ಲಿದ್ದ ಶಾಶ್ವತ್ ಸ್ಥಳದಲ್ಲಿಯೇ ಸಾವುಕಂಡಿದ್ದಾರೆ.
ಈ ಘಟನೆ ಬೆಳಗ್ಗಿನ ಜಾವ 2 ಗಂಟೆಗೆ ಸಂಭವಿಸಿದೆ. ಶಾಶ್ವತ್ ಗೆ 30 ವರ್ಷ ವಯಸ್ಸಾಗಿದ್ದು ಅವರು ತೀರ್ಥಹಳ್ಳಿಯ ಡಿಸಿಸಿ ಬ್ಯಾಂಕ್ ನ ಶಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರ ಜೊತೆ ಉಳಿದ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೊಲೆರೋದಲ್ಲಿ ಚಾಲಕನೋರ್ವನೆ ಇದ್ದು, ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
collision between cars