ಏ.19 ರಂದು ವಿದ್ಯುತ್ ವ್ಯತ್ಯಯ-Power outage

Suddilive || Shivamogga

ಏ.19 ರಂದು ವಿದ್ಯುತ್ ವ್ಯತ್ಯಯ-Power outage on April 19th

Power, outage

ರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕೇಂದ್ರಕ್ಕೆ ಸರಬರಾಜುವಾಗುವ ಫೀಡರ್ ನ ತುರ್ತುಗಾಮಗಾರಿ ಹಿನ್ನಲೆಯಲ್ಲಿ ಏ.19 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 

ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಮಾರ್ಗಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.19 ರಂದು ಬೆಳಗ್ಗೆ 09-00 ರಿಂದ ಸಂಜೆ 06.00ರವರೆಗೆ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ, ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐ.ಟಿ.ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ.ಕಾಲೋನಿ, ನವುಲೆಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಕೆ.ಎಂ.ಎಫ್.ಡೈರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಆಲ್ಕೊಳ ವಿದ್ಯುತ್ ಕೇಂದ್ರದ ಫೀಡರ್ ಕಾಮಗಾರಿ

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-3 ಮತ್ತು ಎ.ಎಫ್.-5ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.19 ರಂದು ಬೆಳಗ್ಗೆ 09-00 ರಿಂದ ಸಂಜೆ 05.00ರವರೆಗೆ ಗಾಡಿಕೊಪ್ಪ, ಪೊಲೀಸ್ ಲೇಔಟ್, ಅಮೃತ ಲೇಔಟ್, ಗುಡ್‌ಲಕ್ ಸರ್ಕಲ್, ಎಸ್.ವಿ.ಬಡಾವಣೆ ಎ ರಿಂದ ಎಫ್ ಬ್ಲಾಕ್, ಶಾರದ ಅಂಧರ ಶಾಲೆ, ಆಲ್ ಹರೀಮ್ ಲೇಔಟ್, ರಾಮಕೃಷ್ಣ ಶಾಲೆಯ ಹತ್ತಿರ, ಮಹಿಳಾ ಪಾಲಿಟೆಕ್ನಿಕ್ ಮತ್ತು ಸ್ವಿಮಿಂಗ್ ಪೂಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power outage

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close