suddilive || Shivamogga
ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ- Protest by wearing black armbands
ಸ್ಥಳೀಯ ಸಂಸ್ಥೆಗಳ ನೌಕರರಿಗೆ ವೇತವನ್ನ ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿರುವುದನ್ನ ಖಂಡಿಸಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಹಾಗೂ ಪೌರ ನೌಕರರ ಸಂಘ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿವರ್ಹಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನೌಕರರ ಸಂಘ ಎನ್ ಗೋವಿಂದ ಇದು ಮೊದಲೇ ಹಂತದ ಹೋರಾಟವಾಗಿದೆ. ಏ.25 ರವರೆಗೆ ಕಪ್ಪುಪಟ್ಟಿ ಧರಿಸಿ ಹೋರಾಟ ನಡೆಸಲಿದ್ದೇವೆ. ಎಲ್ಲಾ ಸ್ಥಳಿಯ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.
7 ನೇ ವೇತನ ಆಯೋಗದ ಸೌಲಭ್ಯವನ್ನ ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿದಂತೆ ಮಹಾನಗರ ಪಾಲಿಕೆ ಮತ್ತು ಪುರಸಭೆ ನಗರ ಸಭೆ, ಪಟ್ಟಣ ಪಂಚಾಯಿತಿ ನೌಕರರಿಗೆ ಯಥವತ್ತಾಗಿ ಸರ್ಕಾರದ ಆರ್ಥಿಕ ಇಲಾಖೆಯಿಂದಲೇ ಪಾವತಿಸಲು ಅನುದಾನವನ್ನ ಬಿಡುಗಡೆ ಮಾಡಬೇಕು.
ಪಾಲಿಕೆ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ನೌಕರುಗಳಿಗೆ ಎಸ್ಎಫ್ ಸಿ ವೇತನ ನಿಧಿಯಲ್ಲಿ ಶೇ.20ವರಿಂದ 15% ಪ್ರತಿಶಿತ ಅನುದಾನ ಕಡಿತ ಮಾಡಿ ವೇತನ ಬಿಡುಗಡೆ ಮಾಡಬೇಕು. ಸರ್ಕಾರದ ಆರ್ಥಿಕ ಇಲಾಖೆಯಿಂದಲೇ ಸಂಪೂರ್ಣ ವೇತನ ಭರಿಸುವುದು.
ರಾಜ್ಯ ನೌಕರರಿಗೆ ಜಾರಿ ಮಾಡಿರುವ ಆರೋಗ್ಯ ಸಂಜೀವಿನಿ, ಯೋಜನೆಯನ್ನ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಬಿಡುಗಡೆ ಮಾಡಬೇಕು. ಕೆಜಿಐಡಿ ಜಿಪಿಎಫ್, ಪಾಲಿಕೆ ವೃಂದ, ನೇಮಕಾತಿ ನಿಯಮಾವಳಿಯನ್ನ ತಿದ್ದಪಡಿ ಕರಡು ಅಧಿಸೂಚನೆ ಕೂಡಲೇ ಜಾರಿ ಮಾಡಬೇಕು ಎಂದು ಆಗದರಹಿಸಿದರು.
Protest by wearing black armbands