ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ವಿಹೆಚ್ ಪಿ ಬಜರಂಗದಳ ಪ್ರತಿಭಟನೆ-Protest by VHP

 Suddilive || Shivamogga

ಹಿಙದೂಗಳ ಮೇಲೆ ದೌರ್ಜನ್ಯ ಖಂಡಿಸಿ ವಿಹೆಚ್ ಪಿ ಬಜರಂಗದಳ ಪ್ರತಿಭಟನೆ-Protest by VHP 

VHP, protest

ಪಶ್ಚಿಮ ಬಂಗಾಳದಲ್ಲಿ  ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನ‌ ಖಂಡಿಸಿ ಇಂದು  ವಿಶ್ವ ಹಿಂದೂ ಪರಿಷದ್ ಬಜರಂಗದಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ  ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. 

ಮಮತಾ ಸರ್ಕಾರವು ಭಾರತದೇ ಸಂವಿಧಾನಾತ್ಮಕ ರಚನೆಗೆ ಧಕ್ಕೆ ತಂದು ತನ್ನ ಸರ್ಕಾರ ಮತ್ತು ಮತಬ್ಯಾಂಕ್ ಉಳಿಸಿಕೊಳ್ಳಲು ಯಾವುದೇ ದಿಕ್ಕಿನಲ್ಲಿ ಹೋಗಬಹುದು.

ಬಂಗಾಳದಲ್ಲಿ ರಾಷ್ಟ್ರೀಯ ಭದ್ರತೆಯು ಅಪಾಯದಲ್ಲಿದೆ. ಬಾಂಗ್ಲಾದೇಶ ಮತ್ತು ರೊಹಿಂಗ್ಯಾ ದ್ವಾರ ಗೂಢಚಾರಿಗಳನ್ನು ನಿರ್ಬಂಧವಿಲ್ಲದೆ ಪ್ರವೇಶಿಸಲು ಬಿಡಲಾಗುತ್ತಿದೆ. ಅವರ ಆಧಾರ್ ಕಾರ್ಡ್‌ಗಳನ್ನು ಕೂಡ ತಯಾರಿಸಲಾಗುತ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಗಳು ಹೆಚ್ಚು ಸಕ್ರಿಯವಾಗುತ್ತಿವೆ.

ಹಿಂದೂಗಳ ವಿರುದ್ಧ ಹಿಂಸೆ ಹೆಚ್ಚುತ್ತಿದೆ. ಕೋರ್ಟ್ ಆದೇಶದ ಮೂಲಕವೇ ಹಿಂದೂ ಹಬ್ಬಗಳಿಗೆ ಅನುಮತಿ ದೊರೆಯುತ್ತಿದೆ. ಅವರಿಗೆ ರಕ್ಷಣೆ ನೀಡುವ ಅರ್ಧಸೈನಿಕ ಪಡೆಗಳನ್ನೂ ಗುರಿಯಾಗಿಸಲಾಗುತ್ತಿದೆ.

ಹಿಂದೂಗಳ ಅಸ್ತಿತ್ವವೇ ಅಪಾಯದಲ್ಲಿದೆ. ಕಾನೂನು ಮತ್ತು ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದೆ. ತೃಣಮೂಲದ ಅಸಾಮಾಜಿಕ ಶಕ್ತಿಗಳು ಮತ್ತು ಜಿಹಾದಿ ಗೂಂಡಾಗಳ ನಿಯಂತ್ರಣದಲ್ಲಿ ಆಡಳಿತ ನಡೆಯುತ್ತಿದೆ. ಇಂದು ಈ ಹಿಂಸೆ ಮುರ್ಶಿದಾಬಾದ್‌ ನಿಂದ ಇಡೀ ಬಂಗಾಳದತ್ತ ವಿಸ್ತರಿಸುತ್ತಿದ್ದು, ಶೀಘ್ರದಲ್ಲೇ ಇದು ಬಂಗಾಳದೊಳಗೆ ಮಾತ್ರ ಅಲ್ಲದೆ ದೇಶದ ಇತರ ಭಾಗಗಳಲ್ಲಿಯೂ ಹರಡಬಹುದು.

ಆದ್ದರಿಂದ ಬಂಗಾಳದಲ್ಲಿ ತಕ್ಷಣದಿಂದಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು.ಬಂಗಾಳದ ಹಿಂಸೆಗೆ ಸಂಬಂಧಿಸಿದ ತನಿಖೆಯನ್ನು ಎನ್‌ಐಎ ಮೂಲಕ ಮಾಡಬೇಕು ಮತ್ತು ಆರೋಪಿಗಳಿಗೆ ತಕ್ಷಣದ ಶಿಕ್ಷೆ ನೀಡಬೇಕು. ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೇಂದ್ರದ ಭದ್ರತಾ ಪಡೆಗಳ ಕೈಗೆ ಒಪ್ಪಿಸಬೇಕು.

ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಗೂಢಚಾರಿಗಳನ್ನು ಗುರುತಿಸಿ ಅವರನ್ನು ತಕ್ಷಣ ದೇಶದಿಂದ ಹೊರದಬ್ಬಬೇಕು. ಬಂಗಾಳ ಮತ್ತು ಬಾಂಗ್ಲಾದೇಶದ 450 ಕಿಮೀ ಗಡಿಯ ಮೇಲೆ ತಂತಿ ಬೇಲಿ ಹಾಕುವ ಕೆಲಸವನ್ನು ಕೂಡ ತಕ್ಷಣ ಪ್ರಾರಂಭಿಸಬೇಕು. ಇದನ್ನು ಮಮತಾ ಬ್ಯಾನರ್ಜಿ ಅವರು ನಿಲ್ಲಿಸಿದ್ದರು

 ರಾಷ್ಟ್ರದ ಏಕತೆ ಮತ್ತು ಸಾಮುದಾಯಿಕ ಶಾಂತಿ ಉಳಿಸಲು ತಕ್ಷಣದ ಮತ್ತು ದಕ್ಷ ಕ್ರಮ ಕೈಗೊಳ್ಳುವಂತೆ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ. ಪ್ರತಿಭಟನೆಯಲ್ಲಿ ಶಾಸಕ ಚೆನ್ನಬಸಪ್ಪ, ಜಬಜರಂಗದಳದ ಸಂಯೋಜಕ ರಾಜೇಶ್ ಗೌಡ, ವಿಹೆಚ್ ಪಿ ಜಿಲ್ಲಾಧ್ಯಕ್ಷ ವಾಸುದೇವ್, ಕಾರ್ಯದರ್ಶಿ ಆನಂದ ರಾವ್, ಬಜರಂಗ ದಳದ ಸಹ ಸಂಯೋಜಕ ಅಂಕುಶ್, ಸುರೇಶ್ ಬಾಬು ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು‌. 

Protest by VHP 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close