ಮಳೆಗಾಳಿಗೆ ಜನಜೀವನ ಅಸ್ತವ್ಯಸ್ತ-Rainstorm disrupts public life

 Suddilive || Shivamogga

 ಮಳೆಗಾಳಿಗೆ ಜನಜೀವನ ಅಸ್ತವ್ಯಸ್ತ-Rainstorm disrupts public life





ಶಿವಮೊಗ್ಗದಲ್ಲಿ ಬರ್ಜರಿ ಮಳೆ ಸುರಿದಿದೆ. ಒಂದು ಗಂಟೆಗೂ ಅಧಿಕ ಮಳೆಯಿಂದಾಗಿ ಸಿಟಿ ನೀರಾಗಿ ಹೋಗಿದೆ. 

ಮಳೆ ಸಿಡಿಲು ಮಿಂಚು ಒಟ್ಟಿಗೆ ಸುರಿಯುತ್ತಿರುವುದರಿಂದ ಶಿವಮೊಗ್ಗದ ಬಹುಪಾಲು ಬಡಾವಣೆಗಳಿಗೆ ವಿದ್ಯುತ್ ಇಲ್ಲದಂತಾಗಿದೆ. ನಿನ್ನೆ 10-15 ನಿಮಿಷ ಮಳೆ ಸುರಿದಿತ್ತು. 

ಈ ಮಳೆ ಕೊಂಚ ತಂಪು ನೀಡಿದರು. ಬೆಳಿಗ್ಗೆ ಬಿಸಿಲ ಬೇಗೆ ಹೆಚ್ಚಾಗಿತ್ತು. ಸಂಜೆಯ ಹೊತ್ತಿಗೆ ಮೋಡಗಳು ತಂಪೆರೆದಿವೆ. ಎಂದಿನಂತೆ ಮಳೆಯ ಆವಾಂತರವೂ ಸಹ ಕಂಡು ಬಂದಿದೆ. 

ಬಾಲರಾಜ್ ಅರಸ್ ರಸ್ತೆಯಿಂದ ರಾಘವೇಂದ್ರ ಸ್ವಾಮಿ ಮಠ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಮೋರಿ ಬ್ಲಾಕ್ ಆಗಿ ದ್ವಿಚಕ್ರ ವಾಹನಗಳು ಮುಳುವಂತರಾಗಿದೆ. ಅಲ್ಲಲ್ಲಿ ಮಳೆಯಿಂದಾಗಿ ಮರಗಳ ಎಕ್ಕೆಗಳು ಉದುರಿವೆ. 

ಇನ್ನೂ ಗೋಡೆ ಕುಸಿತ, ಮನೆಗೆ ನೀರು ನುಗ್ಗಿರುವ ದೃಶ್ಯಗಳು ಲಭ್ಯವಾಗಬೇಕಿದೆ. 

Rainstorm disrupts public life

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close