suddilive || Shivamogga
ಮಳೆಯಲ್ಲೆ ಕಾಂಗ್ರೆಸ್ ವಿರುದ್ಧ ವಿಜೇಂದ್ರ ಗುಡುಗು-Vijendra thunders against Congress even in the rain
ಕಾಂಗ್ರೆಸ್ ಸಾರ್ವಜನಿಕರ 50 ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜೇಂದ್ರ ಆರೋಪಿಸಿದರು.
ಅವರು ಗೋಪಿ ವೃತ್ತದಲ್ಲಿ ಜನಾಕ್ರೋಶದ ಬೃಹತ್ ಮೆರವಣಿಗೆಯಲ್ಲಿ ಮಳೆಯಲ್ಲೇ ನಿಂತು ಮಾತನಾಡಿದರು. ವಿದ್ಯುತ್ ದರ 35 ಡಿಸೇಲ್ 5 ರೂ. ಹೆಚ್ಚಿಸಲಾಗಿದೆ. ಪ್ರತಿ ತಿಂಗಳು 1 ನೇ ತಾರೀಕಿಗೆ ಸರ್ಕಾರಿ ನೌಕರರಿಗೆ ಸಂಬಳವಾಗುತ್ತಿತ್ತು. ಆ ಸಂಬಳ ಈಗ ಆಗುತ್ತಿಲ್ಲ ಎಂದು ದೂರಿದರು.
ಮುಸ್ಲೀಂರಿಗೆ ಮೀಸಲಾತಿ ನೀಡಲಾಗಿದೆ. ಯಾಕೆ ಹಿಂದೂಗಳಲ್ಲಿ ಬಡರು ಕಾಣಲ್ವಾ? ಸಿಎಂ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಎಸ್ ಎಸ್ಟಿಗಳ ಅಭಿವೃದ್ಧಿ ಹಣವನ್ನ ದುರುಪಯೋಗ ಮಾಡಲಾಗಿದೆ.ಪೆಟ್ರೋಲ್ ಮತ್ತು ಡಿಸೇಲ್ ದರ ಕೇಂದ್ರ ಸರ್ಕಾರ ಹೆಚ್ಚಿಸಲಾಗಿದೆ ಎಂದು ದೂರುತ್ತಿದ್ದಾರೆ. ಆದರೆ ಆ ಹೊರೆ ಏಜೆನ್ಸಿಯ ಮೇಲೆ ಹಾಕಲಾಗಿದೆ ಎಂದರು.
ವರುಣ ದೇವತೆ ಆಶೀರ್ವಾದದಿಂದ ಪ್ರತಿಭಟನೆಗೆ ಬಲಬಂದಿದೆ. ಕಾಂಗ್ರೆಸ್ ನ ಬಂಡವಾಳ ಬಿಚ್ಚಿಡಲು ಶಿವಮೊಗ್ಗಕ್ಕೆ ಬರಲಾಗಿದೆ. ಹೋರಾಟ ಅಧಿಕಾರ ದಾಹಕ್ಕಾಗಿ ಅಲ್ಲ ಜನರ ಆಕ್ರೋಶಕ್ಕಾಗಿ ಹೋರಾಟ ನಡೆಯುತ್ತಿದೆ ಎಂದರು.
Vijendra thunders against Congress even in the rain