ಕೂಲಿ ಕೇಳಿದ್ದಕ್ಕೆ ಕೊಲೆ ಮಾಡಿದ್ದ ಆರೋಪಿಗಳಿಗೆ ಶಿಕ್ಷೆ- Sentence for

Suddilive ||Ripponpete

ಕೂಲಿ ಕೇಳಿದ್ದಕ್ಕೆ ಕೊಲೆ ಮಾಡಿದ್ದ ಆರೋಪಿಗಳಿಗೆ ಶಿಕ್ಷೆ -Sentence for those accused of murdering for money


Sentence, for

ಕೂಲಿ ಕೇಳಿದ್ದಕ್ಕೆ ಕೊಲೆ ಪ್ರಕರಣದ ಆರೋಪಿಗಳಿಬ್ಬರಿಗೆ 5 ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 13 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ದಿನಾಂಕ: 22-12-2021 ರಂದು ರಾತ್ರಿ ಗರ್ತಿಕೆರೆ ವಾಸಿ ಸತೀಶ್ ಶೆಟ್ಟಿ ಎಂಬುವವನು ತನ್ನ ಸ್ನೇಹಿತರಾದ ಫಯಾಜ್ @ ಕೋಳಿ ಫಯಾಜ್ ಮತ್ತು ಕೃಷ್ಣ ರವರೊಂದಿಗೆ ಇದ್ದಾಗ  ಕೂಲಿ ಕೆಲಸದ ಹಣ ಕೇಳಿದನೆಂಬ ವಿಚಾರದಲ್ಲಿ ಸತೀಶ್ ಶೆಟ್ಟಿಯನ್ನು  ಅಮೃತ ಗ್ರಾಮದ ಕೆಳಗಿನ ಕೆರೆ ದಂಡೆಯ ಮೇಲೆ ಕರೆದುಕೊಂಡು ಹೋಗಿ ಕತ್ತಿ ಮತ್ತು ಚಾಕುವಿನಿಂದ ಕುತ್ತಿಗೆ, ಎಡ ಕೆನ್ನೆ, ಎಡ ಕಿವಿಯ ಕೆಳಭಾಗಕ್ಕೆ ಕೊಯ್ದು ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವವನ್ನು ಕೆರೆಯ ನೀರಿನಲ್ಲಿ ಹಾಕಿದ್ದರು. ಪ್ರಕರಣ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು‌.

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಮಧುಸೂಧನ್, ಸಿಪಿಐ, ಹೊಸನಗರ ವೃತ್ತರವರು ಪ್ರಕರಣದ ತನಿಖೆಯನ್ನು ನಡೆಸಿ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ಅಣ್ಣಪ್ಪ ನಾಯಕ್, ಜಿ ಸಹಾಯಕ  ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದು, ಘನ 5 ನೇ ಹೆಚ್ಚುವರಿ ಸಿ.ಜೆ & ಜೆ.ಎಮ್.ಎಫ್.ಸಿ ನ್ಯಾಯಾಲಯ ಶಿವಮೊಗ್ಗದಲ್ಲಿ  ಪ್ರಕರಣದ ವಿಚಾರಣೆ ನಡೆದು ಆರೋಪಿತರಾದ 1) ಫಯಾಜ್ @ ಕೋಳಿ ಫಯಾಜ್, 37 ವರ್ಷ, ಬಿದರಳ್ಳಿ ರಸ್ತೆ,  ಗರ್ತಿಕೆರೆ, ಹೊಸನಗರ ಮತ್ತು 2) ಕೃಷ್ಣ,  45 ವರ್ಷ, ಬಿದರಳ್ಳಿ ರಸ್ತೆ,  ಗರ್ತಿಕೆರೆ, ಹೊಸನಗರ ಇವರುಗಳ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಪ್ರಭಾವತಿ ಜಿ  ರವರು ದಿನಾಂಕಃ 29-04-2025 ರಂದು ಆರೋಪಿತರುಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 13 ಸಾವಿರ ರೂ ದಂಡ ವಿಧಿಸಿದ್ದಾರೆ. 

Sentence for

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close