ನನಗೂ ಎಣ್ಣೆ ಹೊಡೆಸು ಎಂದು ದುಂಬಾಲ ಬಿದ್ದವನಿಂದ ಚಾಕು ಇರಿತ-man stabbed with a knife

 Suddilive || Shivamogga

ನನಗೂ ಎಣ್ಣೆ ಹೊಡೆಸು ಎಂದು ದುಂಬಾಲ ಬಿದ್ದವನಿಂದ ಚಾಕು ಇರಿತ -A man stabbed with a knife after asking to drink Liquor

Stabbed, knife


ಶಿವಮೊಗ್ಗದ ಅಶೋಕ ವೃತ್ತದ ಬಳಿ ಕಿರಿಕ್ ಆಗಿದೆ. ಈ ಕಿರಿಕ್ ಪೊಲೀಸ್ ಠಾಣೆಯಲ್ಲಿ ದೂರಾಗಿ ದಾಖಲಾಗಿದೆ. ಬೀದಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಎಣ್ಣೆ ಹೊಡೆಸು ಎಂದು ಅಪರಿಚಿತ ವ್ಯಕ್ತಿಯೋರ್ವ ಕಾಡಿದ್ದಾನೆ.

ಶಶಿ‌ನಾಯ್ಕ ಎಂಬ ಕೋಹಳ್ಫಿಯ ನಿವಾಸಿ ಗಾರೆಕೆಲಸಕ್ಕೆ ಹೋಗುವನಾಗಿದ್ದು ಶಿವಮೊಗ್ಗದ ಅಶೋಕನಗರದಲ್ಲಿ ವಾಸವಾಗಿದ್ದ, ಭಾನುವಾರ ಎಣ್ಣೆ ಹೊಡೆಯುವ ಅಭ್ಯಾಸ ಹೊಂದಿದ್ದ ಶಶಿನಾಯ್ಕ್ ಮನೆಗೆ ಬಂದಿದ್ದ ಪತ್ನಿಯ ತಮ್ಮನ ಜೊತೆ ಬಸ್ ನಿಲ್ದಾಣದ ಹತ್ತಿರದ  ಅಶೋಕ ವೃತ್ತದ ಬಳಿಯಿರುವ ಸಿಎಂ ಬಾರ್ ಗೆ ಬಂದಿದ್ದಾನೆ. 

ಸಿಎಂಬಾರ್ ನಲ್ಲಿ ಎಣ್ಣೆ ಹೊಡೆದು ಸಂತೃಪ್ತಿ ಹೋಟೆಲ್ ಬಳಿ ಬರುತ್ತಿದ್ದಂತೆ ಅಪರಿಚಿನೋರ್ವ ಬಂದು ನಾನು ಸಾಗರದವನು ಈಸ್ಟ್ ವೆಸ್ಟ್ ಬಸ್ ಚಾಲಕ, ನನ್ನ ಹೆಸರು ಫೈರೋಜ್ ಖಾನ್ ಎಂದು, ನನಗೂ ಎಣ್ಣೆ ಹೊಡೆಯುವ ಹಾಗೆ ಅನಿಸಿದೆ. ನೀನು ಎಣ್ಣೆ ಹೊಡೆಯಕ್ಕೆ ಹಣವಿರುತ್ತೆ ನಾನು ಎಣ್ಣೆ ಹೊಡೆಯಲು ನಿನ್ನ ಬಳಿ ಹಣವಿರಲ್ವಾ ಎಂದು ಶಶಿನಾಯ್ಕನ ಜೇಬಿಗೆ ಕೈ ಹಾಕಿದ್ದಾನೆ.

ಅಸಭ್ಯ ವರ್ತನೆಯಿಂದ ಕೂಡಿದ ಫೈರೋಜ್ ಖಾನ್ ನ್ನ ತಳ್ಳಿದ್ದಾನೆ. ಅಷ್ಟಕ್ಕೆ ಅವ್ಯಚ್ಯ ಶಬ್ದಗಳಿಂದ ಬೈದ ಫೈರೋಜ್ ಬ್ಯಾಗ್ ನಿಂದ ಚಾಕು ತೆಗೆದು ಚುಚ್ಚಿ ಓಡಿಹೋಗಿದ್ದಾನೆ. ಮೆಗ್ಗಾನ್ ನಲ್ಲಿ ದಾಖಲಾಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

man stabbed with a knife

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close