Suddilive || Shivamogga
ಬೆಲೆ ಏರಿಕೆ ವಿರುದ್ಧ ಸಿಂಹಸೇನೆ ಪ್ರತಿಭಟನೆ-Simha Sena protests against fare hike
ಬೆಲೆ ಏರಿಕೆ ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಜಿಲ್ಲಾ ಶಾಖೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ದಿನಕ್ಕೊಂದು ವಸ್ತುಗಳಮೇಲೆ ತೆರಿಗೆ ವಿಧಿಸಿ ಸಾರ್ವಜನಿಕರ ಜೀವನ ನಡೆಸುವುದು ಕಷ್ಟಕರವನ್ನುಂಟು ಮಾಡಿದ್ದಾರೆ. ಹಾಲು, ತರಕಾರಿ, ಹಣ್ಣು, ಗ್ಯಾಸು, ಅಬಕಾರಿ, ಸಾರಿಗೆ ವಿದ್ಯುತ್, ನೀರು, ನೋಂದಣಿ ಶುಲ್ಕ, ಛಾಪಾಕಾಗದ ಪೆಟ್ರೋಲ್ ಡಿಸೇಲ್ ಇನ್ನೂ ದಿನ ಬಳಕೆ ವಸ್ತುಗಳ ಮೇಲೆ ಶುಲ್ಕ ಹೆಚ್ಚಿಸಲಾಗಿದೆ ಎಂದು ಮನವಿಯಲ್ಲಿ ಸಂಘಟನೆ ಆಗ್ರಹಿಸಿದೆ.
ಸಾಲದ ಮೇಲೆ ಜನರು ಬದುಕುತ್ತಿದ್ದು ಸಾವಿಗೆ ಶರಣಾಗುವ ಪರಿಸ್ಥಿತಿ ಉದ್ಭವವಾಗಿದೆ. ಮಧ್ಯಮ ವರ್ಗದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ, ಖಾಸಗಿ ಸಂಸ್ಥೆಗಳಲ್ಲಿ ಇರುವ ಕೆಲಸವನ್ನಕೆಲಸಗಾರರು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸರ್ಕಾರದ ವಿರೋಧಿ ಅಲೆ ಹಳ್ಳಿಗಳಲ್ಲಿ ಹರಡುವ ಮೊದಲು ಎಚ್ಚೆತ್ತುಕೊಂಡು ಎದ್ವಥದ್ವಾ ಬೆಲೆ ಏರಿಸಿರುವುದನ್ನ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಎಂ ರವಿಪ್ರಸಾದ್, ರವಿಕುಮಾರ್, ಶಶಿ, ರಫಿಕ್ ಮಧು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
Simha Sena protests against fare hike