suddilive || Shivamogga
ನಾಡೋಜ ಜೋಷಿ ವಿರುದ್ಧ ಸಿಡಿದೆದ್ದ ಶಿವಮೊಗ್ಗ ಕಸಾಪ-Shivamogga KASAPA erupted against Nadoja Joshi
ರಾಜ್ಯ ಕೇಂದ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಮಹೇಶ್ ಜೋಷಿಯನ್ನ ಅಧಿಕಾರದಿಂದ ಕೆಳಗಿಳಿಸಿ ಆಡಳಿತಾಧಿಕಾರಿಗಳನ್ನ ನೇಮಿಸುವಂತೆ ಆಗ್ರಹಿಸಿ ಇಂದು ಕನ್ನಡ ಸಾಹಿತ್ಯ ಪರಿಷತ್ ನ ಹಿತೈಷಿಗಳು ಡಿಸಿ ಮೂಲಕ ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನ ಬೈಲಾದಲ್ಲಿ ತಿದ್ದುಪಡಿ ತಂದು ಪ್ರಮುಖ ವಿಷಯಗಳ ಬಗ್ಗೆ ನಿರ್ಣಯ ಮಾಡುವ ಅಧಿಕಾರವನ್ನ ಕಾರ್ಯಕಾರಿ ಸಮಿತಿಗೆ ನೀಡುವ ಬದಲು ಸಮಿತಿಯ ಅಧ್ಯಕ್ಷರಿಗೆ ನೀಡುವುದನ್ನ ತಡೆಯಬೇಕು.
ಲೆಕ್ಕಪತ್ರಗಳನ್ನ ಸಮರ್ಪಕವಾಗಿ ನೀಡದೆ ಹಫಬಳಿ, ತಾಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ನೇಳನಕ್ಕೆ ನೆರವು ನೀಡದೆ ಅನ್ಯಾಯವಾಗುತ್ತಿದೆ. ಇದನ್ನ ಸರಿಪಡಿಸಬೇಕು. ಮಂಜುನಾಥ ಅವರನ್ನ ಕ್ಷುಲ್ಲಕ ಕಾರಣ ನೀಡಿ ಉಚ್ಚಾಟಿಸುವ ಪ್ರಯತ್ನಕ್ಕೆ ಕೈಹಾಕಿರುವುದನ್ನ ತಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ಸಾಹಿತಿ ಕುಂ.ವೀರಭದ್ರಪ್ಪ ಇಬ್ಬರು ಸೊಸೆಯಂದಿರು ಈ ಶಿವಮೊಗ್ಗದವರಾಗಿದ್ದಾರೆ. ಹಾಗಾಗಿ ಈ ಊರಿನೊಂದಿಗೆ ಭಾವನಾತ್ಮಕ ಸಂಬಂಧವಿದೆ. ಈ ಊರಿನ ಕನ್ನ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ ಮಂಜುನಾಥ್ 24×7 ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿದರು.
ಅವರ ಪ್ರಾಥಮಿಕ ಸದಸ್ಯತ್ವನ್ನ ತೆಗೆಯುವಂತೆ ಆರೋಪಿಸಿ ನೋಟಿಸ್ ನೀಡಿರುವ ಫ್ಯಾಸಿಸಂ ನ ಗುಣವಾಗಿದೆ. ಅಧಿಕಾರವಿಲ್ಲದಾಗ ಮಂಜುನಾಥ್ ಸಾಹಿತ್ಯ ಹುಣ್ಣಿಮೆ ಆಚರಿಸಿಕೊಂಡು ಬಂದವರು. ಸಾಹಿತ್ಯ ಪರಿಷತ್ ವಿಷಯದಲ್ಲಿ ಮಂಜುನಾಥ್ ಕನ್ನಡ ಪರ ಕೆಲಸ ಮಾಡಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮಾದರಿಯಾಗಿದೆ ಎಂದರು.
ಜೋಷಿಯವರು ಮಂಜುನಾಥರನ್ನ ಉಚ್ಚಾಟಿಸಿದರೆ ನ್ಯಾಯಾಲಯ ಸಹ ಒಪ್ಪಲ್ಲ. ರಾಜ್ಯಾಧ್ಯಕ್ಷರನ್ನ ಮೂರು ವರ್ಷದಿಂದ ಐದು ವರ್ಷಕ್ಕೆ ವಿಸ್ತಾರಿಸಿದಾಗ ಸಮಸ್ಯೆ ಉದ್ಭವಿಸಿದೆ. ಅಪ್ರಜಾಪ್ರಭುತ್ವ ಅಧ್ಯಕ್ಷರನ್ನಕೆಳಗಿಳಿಸಿ ಸರ್ಕಾರ ವಿಚಾರಣೆ ನಡೆಸಬೇಕು. ನಿಯೋಗ ಸಿಎಂ ಬಳಿ ಹೋಗಿ ಮನವಿ ಮಾಡಬೇಕಿದೆ ಎಂದು ಕರೆನೀಡಿದರು.
ಪ್ರತಿಭಟನೆಯಲ್ಲಿ ಲಲಿತಮ್ಮ, ಅನುರಾಧ ಕೆ.ಎಸ್, ಸುಶೀಲ ಷಣ್ಮುಗಂ, ಶಾಂತ ಸುರೇಂದ್ರ, ಶ್ರೀಪಾಲ್, ಹುಚ್ಚರಾಯಪ್ಪ, ರಮೇಶ್ ಶೆಟ್ಟಿ, ಜಿಡಿ ಮಂಜುನಾಥ್, ಶಂಕಘಟ್ಟ ರಮೇಶ್, ಕೆ.ಎಲ್ ಅಶೋಕ ಮೊದಲಾದವರು ಉಪಸ್ಥಿತರಿದ್ದರು.
Shivamogga KASAPA erupted